HEALTH TIPS

ಚಿತ್ರೋತ್ಸವದಲ್ಲಿ 31 ಸಿನೆಮಾಗಳ ಪ್ರದರ್ಶನ ತಡೆಯಲಾಗಿದೆ ಎಂಬ ಕೇರಳ ಸರ್ಕಾರದ ಆರೋಪ ತಳ್ಳಿ ಹಾಕಿದ ಕೇಂದ್ರ ಸರ್ಕಾರ

ನವದೆಹಲಿಕೇರಳಂನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸಾಕ್ಷ್ಯಚಿತ್ರ ಮತ್ತು ಕಿರು ಚಿತ್ರೋತ್ಸವದಲ್ಲಿ 31 ಚಲನಚಿತ್ರಗಳನ್ನು ಪ್ರದರ್ಶಿಸಲು ಅನುಮತಿ ನಿರಾಕರಿಸಲಾಗಿದೆ ಎಂಬ ಕೇರಳಂ ಸರಕಾರದ ಆರೋಪವನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೋಮವಾರ ತಳ್ಳಿ ಹಾಕಿದೆ.


18ನೇ ಅಂತಾರಾಷ್ಟ್ರೀಯ ಸಾಕ್ಷ್ಯಚಿತ್ರ ಮತ್ತು ಕಿರು ಚಿತ್ರೋತ್ಸವದಲ್ಲಿ ಈ ಚಲನಚಿತ್ರಗಳನ್ನು ಪ್ರದರ್ಶಿಸಲು ಅನುಮತಿ ನಿರಾಕರಿಸಿರುವುದಕ್ಕೆ ಕೇಂದ್ರ ಸರಕಾರ ಯಾವುದೇ ಕಾರಣ ನೀಡಿಲ್ಲ ಎಂದು ಕೇರಳಂ ಸಂಸ್ಕೃತಿ ಸಚಿವ ಪಿ.ಸಿ.ವಿಷ್ಣುನಾಥ್ ಶನಿವಾರ ಆರೋಪಿಸಿದ್ದರು.

ಮಾಹಿತಿ ಮತ್ತು ಪ್ರಸಾರ ಸಚಿವಾಲಯ ''ಅನುಮೋದನೆ ನೀಡಲಾದ ಚಲನಚಿತ್ರಗಳ ಪಟ್ಟಿಯನ್ನು ಮಾತ್ರ ನಮಗೆ ಕಳುಹಿಸಿದೆ'' ಎಂದು ವಿಷ್ಣುನಾಥ್ ಹೇಳಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಹಲವು ಚಲನಚಿತ್ರಗಳ ಕಥಾ ಸಾರಾಂಶವನ್ನು ಸಚಿವಾಲಯ ಕೇಳಿತ್ತು. ಅದನ್ನು ನಾವು ಮರುದಿನವೇ ಕಳುಹಿಸಿ ಕೊಟ್ಟಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ.

ಈ ಚಲಚಿತ್ರೋತ್ಸವ ಸೆಪ್ಟಂಬರ್ 25ರಿಂದ ಸೆಪ್ಟಂಬರ್ 30ರವರೆಗೆ ತಿರುವನಂತಪುರಂನಲ್ಲಿ ನಡೆಯಲಿದೆ.

ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಳ್ಳುವ ಚಲನಚಿತ್ರಗಳಿಗೆ ಸೆನ್ಸಾರ್ ಮಂಡಳಿಯ ಪ್ರಮಾಣಪತ್ರ ಅಗತ್ಯವಿಲ್ಲದಿದ್ದರೂ, ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಸೆನ್ಸಾರ್ ಶಿಪ್‌ನಿಂದ ವಿನಾಯತಿ ಪಡೆಯುವುದು ಕಡ್ಡಾಯವಾಗಿದೆ.

ಪ್ರದರ್ಶನಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ಆರೋಪಿಸಲಾದ ಚಿತ್ರಗಳಲ್ಲಿ 'ಸ್ಯಾನಿಟೈಸ್ಡ್ ರಿಪಬ್ಲಿಕ್: ಕಾಸ್ಟ್ (ಇ) ಆಯಂಡ್ ಕಾಂಟ್ರಾಕ್ಟ್ಸ್' ಕೂಡ ಸೇರಿದೆ. ಇದು ಕೋವಿಡ್-19 ಸಾಂಕ್ರಾಮಿಕದ ಸಂದರ್ಭ ದಿಲ್ಲಿಯ ಆಸ್ಪತ್ರೆಗಳಲ್ಲಿ ಉದ್ಯೋಗದಲ್ಲಿದ್ದ ನೈರ್ಮಲ್ಯ ಕಾರ್ಮಿಕರ ಜೀವನದ ಕುರಿತಾಗಿದೆ.

ಈ ಪಟ್ಟಿಯಲ್ಲಿ ರಾಷ್ಟ್ರೀಯ ಮಹತ್ವದ ದಿಲ್ಲಿ ರಸ್ತೆಗೆ ಸಂಬಂಧಿಸಿದ ಸಾರ್ವಜನಿಕ ಮತ್ತು ವೈಯುಕ್ತಿಕ ನೆನಪುಗಳನ್ನು ಅನ್ವೇಷಿಸುವ 'ಪಾರ್ಲಿಮೆಂಟ್ ಸ್ಟ್ರೀಟ್' ಚಿತ್ರವೂ ಸೇರಿದೆ.

ಅರೇಬಿಕ್ ಭಾಷೆಯ ಸಾಕ್ಷ್ಯಚಿತ್ರ 'ಪುಟ್ ಯುವರ್ ಸೋಲ್ ಆನ್ ಯುವರ್ ಹ್ಯಾಂಡ್ ಆಯಂಡ್ ವಾಕ್' ನಿರ್ದೇಶಕಿ ಸೆಪಿಡೆ ಫಾರ್ಸಿ ಮತ್ತು ಫೆಲೆಸ್ತೀನ್ ಪತ್ರಿಕಾ ಛಾಯಾಗ್ರಾಹಕಿ ಫಾತಿಮಾ ಹಸ್ಸೌನಾ ನಡುವಿನ ವೀಡಿಯೊ ಕರೆಗಳ ಮೂಲಕ ಗಾಝಾದ ಜೀವನವನ್ನು ಚಿತ್ರಿಸುತ್ತದೆ.

ಪ್ರದರ್ಶನಕ್ಕಾಗಿ ಯಾವುದೇ ಚಲನಚಿತ್ರವನ್ನು ನಿರಾಕರಿಸಿಲ್ಲ ಎಂದು ಕೇಂದ್ರ ಸರಕಾರ ಸೋಮವಾರ ಸ್ಪಷ್ಟಪಡಿಸಿದೆ.

ಆರು ಚಿತ್ರಗಳಿಗೆ ಸಂಬಂಧಿಸಿ ವಿವರವಾದ ಕಥಾ ಸಾರಾಂಶವನ್ನು ಒದಗಿಸಲು ಕೋರಲಾಗಿದೆ. ಚಿತ್ರಗಳ ವಿಷಯಕ್ಕೆ ಅನುಗುಣವಾಗಿ ಕೆಲವನ್ನು ಪರಿಶೀಲನೆಗಾಗಿ ವಿವಿಧ ರಂಗಗಳ ತಜ್ಞರ ಸಮಿತಿಗೆ ಕಳುಹಿಸಲಾಗಿದೆ ಎಂದು ಅದು ಹೇಳಿದೆ.

ಚಲನಚಿತ್ರಗಳಿಗೆ ಅನುಮತಿ ನಿರಾಕರಿಸಲಾಗಿದೆ ಎಂದು ತಿಳಿದು ನನಗೆ ಆಘಾತವಾಗಿದೆ ಎಂದು ತಿರುವನಂತಪುರಂ ಸಂಸದ ಶಶಿ ತರೂರ್ ಹೇಳಿದ್ದರು.

''ಇದು ವಿಶ್ವ ಸಿನೆಮಾದ ಅತ್ಯುತ್ತಮ ಚಿತ್ರಗಳಿಗೆ ವೇದಿಕೆ ಒದಗಿಸುವ ಭಾರತದ ಹೆಮ್ಮೆಯ ಪರಂಪರೆಗೆ ಮಾಡಿದ ದ್ರೋಹ ಮಾತ್ರವಲ್ಲ, ನಮ್ಮ ಪ್ರಜಾಪ್ರಭುತ್ವದ ಅತಿ ದೊಡ್ಡ ಆಸ್ತಿಯಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ'' ಎಂದು ಅವರು ಹೇಳಿದ್ದಾರೆ.

ಈ ಹೇಳಿಕೆಯ ನಂತರ ಕೇಂದ್ರ ಸರಕಾರ ಈ ಸ್ಪಷ್ಟನೆ ನೀಡಿದೆ.










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries