ಬ್ಯಾಂಕಾಕ್ (AP): ಪ್ರಬಲ ಬಂಡಾಯ ಗುಂಪಿನ ನಿಯಂತ್ರಣದಲ್ಲಿರುವ ಪ್ರದೇಶದ ಮಾರುಕಟ್ಟೆ ಸಮೀಪ ಮ್ಯಾನ್ಮಾರ್ ಸೇನೆಯು ಸೋಮವಾರ ನಡೆಸಿದ ವಾಯು ದಾಳಿಯಲ್ಲಿ ಕನಿಷ್ಠ 49 ಮಂದಿ ಮೃತರಾಗಿದ್ದು, 58 ಜನರು ಗಾಯಗೊಂಡಿದ್ದಾರೆ.
'ದೇಶದ ಎರಡನೇ ದೊಡ್ಡ ಪಟ್ಟಣವಾದ ಮ್ಯಾಂಡಲೇನ ಪಶ್ಚಿಮಕ್ಕೆ 340 ಕಿ.ಮೀ. ದೂರದಲ್ಲಿರುವ ಕ್ಯೋಕಟಾವ್ ಪ್ರದೇಶದಲ್ಲಿ ದಾಳಿ ನಡೆದಿದೆ. ಯುದ್ಧ ವಿಮಾನವೊಂದು ಎರಡು ಸ್ಫೋಟಕಗಳನ್ನು ಬೀಳಿಸಿದ್ದು, ವರ್ತಕರು, ಖರೀದಿದಾರರು ಮತ್ತು ಪಾದಚಾರಿಗಳು ಸಾವಿಗೀಡಾಗಿದ್ದಾರೆ' ಎಂದು ಬಂಡಾಯ ಗುಂಪಾದ ಅರಾಕನ್ ಆರ್ಮಿ ತಿಳಿಸಿದೆ.
'ಶೀಘ್ರದಲ್ಲೇ ಪರಿಣಾಮಕಾರಿ ಪ್ರತೀಕಾರದ ಕ್ರಮಗಳನ್ನು ಕೈಗೊಳ್ಳಲಾಗುವುದು' ಎಂದೂ ಅದು ಹೇಳಿಕೆಯಲ್ಲಿ ತಿಳಿಸಿದೆ.

