HEALTH TIPS

ಕಾಕ್‌ ಪಿಟ್‌ ನಲ್ಲಿ ಪೈಲಟ್‌ ಗಳ ನಡುವೆ ಘರ್ಷಣೆ: ಇಸ್ರೇಲ್ ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನ ಸೌದಿ ಅರೇಬಿಯಾದಲ್ಲಿ ತುರ್ತು ಭೂಸ್ಪರ್ಶ

ರಿಯಾದ್: ಕಾಕ್‌ ಪಿಟ್‌ನಲ್ಲಿ ಇಬ್ಬರು ಪೈಲಟ್‌ ಗಳ ನಡುವೆ ಘರ್ಷಣೆ ನಡೆದ ಹಿನ್ನೆಲೆಯಲ್ಲಿ, ದುಬೈನಿಂದ ಟೆಲ್ ಅವೀವ್‌ ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನವೊಂದು ಸೌದಿ ಅರೇಬಿಯದ ತಬೂಕ್‌ ನಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಬುಧವಾರ ನಡೆದಿದೆ. ಘಟನೆಯಿಂದ ವಿಮಾನದಲ್ಲಿದ್ದ ಪ್ರಯಾಣಿಕರು ಆತಂಕಕ್ಕೀಡಾಗಿದ್ದರು ಎಂದು ವರದಿಯಾಗಿದೆ. 


ದುಬೈನಿಂದ ಟೆಲ್ ಅವೀವ್‌ ಗೆ ತೆರಳುತ್ತಿದ್ದ ಫ್ಲೈದುಬೈಯ ಬೋಯಿಂಗ್ 737 ಮ್ಯಾಕ್ಸ್ ವಿಮಾನವು ಹಾರಾಟದ ವೇಳೆ ತುರ್ತು ಪರಿಸ್ಥಿತಿ ಘೋಷಿಸಿತು. ಬಳಿಕ ಉತ್ತರ ಸೌದಿ ಅರೇಬಿಯದತ್ತ ವಿಮಾನದ ಮಾರ್ಗ ಬದಲಿಸಿ ತಬೂಕ್‌ ನಲ್ಲಿ ಇಳಿಸಲಾಯಿತು.

ವಿಮಾನ ತುರ್ತು ಪರಿಸ್ಥಿತಿ ಘೋಷಿಸಿದ ಬೆನ್ನಲ್ಲೇ, ವಿಮಾನ ಅಪಹರಣವಾಗಿರಬಹುದು ಎಂಬ ಆತಂಕ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಇಸ್ರೇಲ್ ವಾಯುಪಡೆಯ ಯುದ್ಧವಿಮಾನಗಳು ವಿಮಾನದತ್ತ ಧಾವಿಸಿದವು ಎಂದು ಹೀಬ್ರೂ ಮಾಧ್ಯಮಗಳು ವರದಿ ಮಾಡಿವೆ.

ಆದರೆ, ಇದು ಹೈಜಾಕ್ ಪ್ರಕರಣವಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿಯ ವಕ್ತಾರರು ಸ್ಪಷ್ಟಪಡಿಸಿದ್ದಾರೆ. ಪ್ರಧಾನಿ ನೆತನ್ಯಾಹು ಅವರ ಮತ್ತೊಬ್ಬ ವಕ್ತಾರರೂ ವಿಮಾನ ಅಪಹರಣದ ಭೀತಿಯನ್ನು ತಳ್ಳಿಹಾಕಿದ್ದಾರೆ.

ಸ್ಥಳೀಯ ಹೀಬ್ರೂ ಮಾಧ್ಯಮಗಳ ಪ್ರಕಾರ, 27 ಮಕ್ಕಳು ಸೇರಿದಂತೆ ಒಟ್ಟು 174 ಪ್ರಯಾಣಿಕರು ವಿಮಾನದಲ್ಲಿದ್ದರು. ಪೈಲಟ್‌ ಗಳ ನಡುವಿನ ಘರ್ಷಣೆಯ ಸಂದರ್ಭದಲ್ಲಿ ವಿಮಾನದಿಂದ ಹೈಜಾಕ್‌ ಗೆ ಸಂಬಂಧಿಸಿದ 7,500 ತುರ್ತು ಸಂಕೇತ ರವಾನೆಯಾಗಿತ್ತು ಎಂದು Ynet ವರದಿ ಮಾಡಿದೆ. ಇದರಿಂದ ವಿಮಾನ ಅಪಹರಣದ ಆತಂಕ ಮತ್ತಷ್ಟು ಹೆಚ್ಚಾಗಿತ್ತು.

ಫ್ಲೈದುಬೈ ವಿಮಾನವು ತುರ್ತು ಭೂಸ್ಪರ್ಶ ಮಾಡಿರುವುದನ್ನು ವಿಮಾನಯಾನ ಸಂಸ್ಥೆ ದೃಢಪಡಿಸಿದೆ. ಘಟನೆಯ ಕುರಿತು ಹೆಚ್ಚಿನ ವಿವರಗಳನ್ನು ಸಂಸ್ಥೆ ನೀಡಿಲ್ಲ. ಪೈಲಟ್‌ ಗಳ ನಡುವಿನ ಘರ್ಷಣೆ ಹಾಗೂ 7,500 ಸಂಕೇತದ ವಿವರಗಳನ್ನು ಇಸ್ರೇಲ್‌ ಅಧಿಕಾರಿಗಳು ಮತ್ತು ಹೀಬ್ರೂ ಮಾಧ್ಯಮಗಳು ವರದಿ ಮಾಡಿವೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries