HEALTH TIPS

ಗಡಿಗಳ ಕಾವಲಿಗೆ 'ಸುದರ್ಶನ' ಬಲ: 5 ಹೆಚ್ಚುವರಿ ಎಸ್‌-400 ಖರೀದಿಗೆ ಭಾರತ ಸಜ್ಜು

ನವದೆಹಲಿ: ದೇಶದ ವಾಯು ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಭಾರತವು ರಷ್ಯಾದಿಂದ ಐದು ಹೆಚ್ಚುವರಿ 'ಎಸ್‌-400 ಸುದರ್ಶನ' ಕ್ಷಿಪಣಿ ವ್ಯವಸ್ಥೆಗಳನ್ನು ಖರೀದಿಸಲು ಮುಂದಾಗಿದೆ. ಈ ಸಂಬಂಧ ಭಾರತ ಆಹ್ವಾನಿಸಿದ್ದ ಟೆಂಡರ್‌ಗೆ ರಷ್ಯಾ ವಿವರವಾದ ಪ್ರಸ್ತಾವ ಸಲ್ಲಿಸಿದೆ.


ಯೋಜನೆಯ ಒಟ್ಟು ವೆಚ್ಚ ₹50,000 ಕೋಟಿಗೂ ಅಧಿಕ ಎಂದು ರಕ್ಷಣಾ ಇಲಾಖೆ ತಿಳಿಸಿವೆ. ರಷ್ಯಾ ಸಲ್ಲಿಸಿರುವ ಪ್ರಸ್ತಾವ ಸದ್ಯ ರಕ್ಷಣಾ ಸಚಿವಾಲಯದ ಪರಿಶೀಲನೆಯಲ್ಲಿದೆ.

2026ರ ಮಾರ್ಚ್‌ನಲ್ಲಿ ಭಾರತವು ಐದು ಹೆಚ್ಚುವರಿ ಎಸ್‌-400 ಸ್ಕ್ವಾಡ್ರನ್‌ಗಳ ಖರೀದಿಗೆ ಅನುಮೋದನೆ ನೀಡಿತ್ತು. ಈ ಕ್ಷಿಪಣಿಗಳನ್ನು ಪೂರ್ವ ಮತ್ತು ಪಶ್ಚಿಮ ಗಡಿಗಳಲ್ಲಿ ನಿಯೋಜಿಸುವ ಮೂಲಕ ವಾಯು ರಕ್ಷಣಾ ಜಾಲವನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿದೆ.

2018ರಲ್ಲಿ ಮಾಡಿಕೊಂಡ ಒಪ್ಪಂದದಡಿ ಭಾರತವು ಎಸ್‌-400 ಮಾದರಿಯ 5 ಸ್ಕ್ವಾಡ್ರನ್‌ಗಳನ್ನು ಖರೀದಿಸುತ್ತಿದೆ. ಈ ಪೈಕಿ ಈಗಾಗಲೇ ನಾಲ್ಕು ಸ್ಕ್ವಾಡ್ರನ್‌ಗಳು ಭಾರತಕ್ಕೆ ತಲುಪಿವೆ. ಐದನೇ ಸ್ಕ್ವಾಡ್ರನ್‌ ನವೆಂಬರ್‌ 2026ರ ವೇಳೆಗೆ ತಲುಪುವ ನಿರೀಕ್ಷೆಯಿದೆ.

'ಆಪರೇಷನ್ ಸಿಂಧೂರ' ಸಂದರ್ಭದಲ್ಲಿ ಎಸ್‌-400 ಭಾರತದ ವಾಯು ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.

ಹೊಸ ಒಪ್ಪಂದ ಅಂತಿಮಗೊಂಡರೆ, ಭಾರತ ಹೊಂದಿರುವ ಎಸ್‌-400 ಸ್ಕ್ವಾಡ್ರನ್‌ಗಳ ಸಂಖ್ಯೆ 10ಕ್ಕೆ ಏರಿಕೆ ಆಗಲಿದೆ.

ಎಸ್‌-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯು, ದೂರದಿಂದಲೇ ಶತ್ರು ಪಡೆಯ ಕ್ಷಿಪಣಿಯನ್ನು ಗುರುತಿಸಿ, ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries