ಕಾಸರಗೋಡು: ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪತಿಯ ಆರೈಕೆಗಾಗಿ ಬಂದಿದ್ದ ಮಹಿಳೆಯ52ಸಾವಿರ ರೂ. ಒಳಗೊಂಡ ಪರ್ಸ್ ಕಳವುಗೈದ ಪ್ರಕರಣದ ಆರೋಪಿಯನ್ನು ಕಾಸರಗೋಡು ನಗರ ಪೆÇಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಮೆಲ್ವಿನ್ ಜೋಸ್ ಮತ್ತು ಎಸ್‍ಐ ಮನೋಜ್ ನೇತೃತ್ವದ ಪೆÇಲೀಸರ ತಂಡ ಕಣ್ಣೂರಿನಿಂದ ಬಂಧಿಸಿದೆ. ಕಣ್ಣೂರು ಇರಿಟ್ಟಿ ಪಳ್ಳಂಜೇರಿಮುಕ್ ನಿವಾಸಿ ರಾಜೇಶ್ ಕುಮಾರ್ (30) ಬಂಧಿತ.
ಆ. 29ರ ರಾತ್ರಿ 7.30ರಿಂದ ಮರುದಿನ ಬೆಳಗ್ಗೆ 8.20ರ ಮಧ್ಯೆ ಕಳವು ನಡೆದಿದೆ. ಮಾಯಿಪ್ಪಾಡಿ ತೈವಳಪ್ಪು ಹೌಸ್‍ನ ಎಂ. ಅಬ್ಬಾಸ್ ಎಂಬವರನ್ನು ಚಿಕಿತ್ಸೆಗಾಗಿ ಕಾಸರಗೋಡು ನುಳ್ಳಿಪ್ಪಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರ ಆರೈಕೆಗಾಗಿ ಇವರ ಪತ್ನಿ ಆಸ್ಪತ್ರೆಗೆ ಆಗಮಿಸಿದ್ದರು. ಇವರ ವಶದಲ್ಲಿದ್ದ ನಗದು ಹೊಂದಿದ ಪರ್ಸನ್ನು ಕೊಠಡಿಯಲ್ಲಿರಿಸಿದ್ದು, ಈ ಸಂದರ್ಭ ರಾಜೇಶ್‍ಕುಮಾರ್ ಕೊಠಡಿಗೆ ಆಗಮಿಸಿ ಪರ್ಸ್‍ನೊಂದಿಗೆ ಹೊರ ಹೋಗುತ್ತಿರುವುದು ಸಿಸಿ ಕ್ಯಾಮರಾ ದೃಶ್ಯಾವಳಿಯಲ್ಲಿ ಸೆರೆಯಾಗಿತ್ತು. ಅಬ್ಬಾಸ್ ಅವರ ಪುತ್ರ ಅಬ್ದುಲ್‍ಖಾದರ್ ನೀಡಿರುವ ದೂರಿನನ್ವಯ ನಗರಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.


