HEALTH TIPS

ಭಾರತದ 5 ಕೋಟಿ ಶಾಲಾ ಮಕ್ಕಳಿಗಿಲ್ಲ ಸ್ವಚ್ಛತಾ ಸೌಲಭ್ಯ: ಯುನಿಸೆಫ್‌ ವರದಿ

ನವದೆಹಲಿ (PTI): 'ಭಾರತದ 5 ಕೋಟಿ ಮಕ್ಕಳು ತಮ್ಮ ಶಾಲೆಗಳಲ್ಲಿ ನೈರ್ಮಲ್ಯದ ಕೊರತೆ ಎದುರಿಸುತ್ತಿದ್ದಾರೆ. ಮಕ್ಕಳಿಗಾಗಿ ಸ್ವಚ್ಛತಾ ಸೌಲಭ್ಯ ಇಲ್ಲದ ದೇಶಗಳ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿ ಇದೆ' ಎಂದು ವಿಶ್ವ ಸಂಸ್ಥೆಯ ಯುನಿಸೆಫ್‌ನ ಜಂಟಿ ಮೇಲ್ವಿಚಾರಣೆ ಕಾರ್ಯಕ್ರಮ (ಜೆಎಂಪಿ) ನೀಡಿದ ವರದಿಯಲ್ಲಿ ಹೇಳಲಾಗಿದೆ. 


2015ರಿಂದ 2025ರ ಅವಧಿಯಲ್ಲಿ ಅಧ್ಯಯನ ನಡೆಸಲಾಗಿದೆ. ಭಾರತದ ನಂತರದ ಸ್ಥಾನಗಳಲ್ಲಿ ನೈಜಿರಿಯಾ (3.4 ಕೋಟಿ), ಇಥಿಯೋಪಿಯಾ (2.6 ಕೋಟಿ), ಡೆಮಾಕ್ರಟಿಕ್‌ ರಿಪಬ್ಲಿಕ್‌ ಆಫ್‌ ದಿ ಕಾಂಗೊ (1.1 ಕೋಟಿ) ಮತ್ತು ಇಂಡೋನೇಷ್ಯಾ (80 ಲಕ್ಷ) ಇದೆ.

ಇನ್ನೊಂದು ಪ್ರಮುಖ ಅಂಶವೆಂದರೆ, 2015ರಿಂದ 2025ರ ಅವಧಿಯಲ್ಲಿ ಭಾರತದಲ್ಲಿ ಸ್ವಚ್ಛತೆ ಸೌಲಭ್ಯ ಇಲ್ಲದ ಶಾಲೆಗಳ ಸಂಖ್ಯೆಯು ಶೇ 14ರಷ್ಟು ಇಳಿಕೆಯಾಗಿದೆ. 'ಶಾಲೆಗಳಲ್ಲಿ ಕುಡಿಯುವ ನೀರು, ಸ್ವಚ್ಛತೆ, ವೈಯಕ್ತಿತ ನೈರ್ಮಲ್ಯ 2015-2025'ರ ವರದಿಯಲ್ಲಿ ಈ ಎಲ್ಲ ಮಾಹಿತಿಗಳಿವೆ.

'ಶಾಲೆಗಳಲ್ಲಿ ಸ್ವಚ್ಛತಾ ಸೌಲಭ್ಯ ಇಲ್ಲ 24.4 ಕೋಟಿ ಮಕ್ಕಳಿದ್ದಾರೆ. ಈ ಪೈಕಿ ಭಾರತದಲ್ಲಿಯೇ 5 ಕೋಟಿ ಮಕ್ಕಳಿದ್ದಾರೆ. ಅಂದರೆ, ಒಟ್ಟು ಮಕ್ಕಳ ಪೈಕಿ ಸುಮಾರು ಐದನೇ ಒಂದು ಭಾಗದಷ್ಟು ಮಕ್ಕಳು ಭಾರತದಲ್ಲಿ ಇದ್ದಾರೆ' ಎಂದು ವರದಿಯಲ್ಲಿ ಹೇಳಲಾಗಿದೆ.

'ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯದ ವಿಚಾರದಲ್ಲಿ ಭಾರತವು ತುಸು ಉತ್ತಮ ಸಾಧನೆ ತೋರಿದೆ. ಆದರೂ 1.2 ಕೋಟಿ ಶಾಲಾ ಮಕ್ಕಳಿಗೆ ಕುಡಿಯುವ ನೀರಿನ ಸೌಲಭ್ಯ ಇಲ್ಲ. ಕುಡಿಯುವ ನೀರಿನ ವಿಚಾರದಲ್ಲಿ ಅಧ್ಯಯನ ನಡೆಸಿದ ಅವಧಿಯಲ್ಲಿ ಪ್ರತಿ ವರ್ಷವೂ ಶೇ 4ರಷ್ಟು ಪ್ರಗತಿಯನ್ನು ಭಾರತ ಸಾಧಿಸಿದೆ' ಎಂದು ವರದಿ ಹೇಳಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries