ಬದಿಯಡ್ಕ: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಆರನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ಋಕ್ ಸಂಹಿತಾ ಯಾಗ ಶ್ರೀಮಠದಲ್ಲಿ ಸೋಮವಾರ ಪ್ರಾರಂಭಗೊಂಡಿತು.
ವೇದಮೂರ್ತಿ ವಸಂತ ಭಟ್ ನೆಲ್ಲಿತೀರ್ಥ ಅವರ ಪೌರೋಹಿತ್ಯದಲ್ಲಿ ಯಾಗ ನಡೆದುಬರುತ್ತಿದೆ. ಕಾರ್ಯಕ್ರಮದಲ್ಲಿ ಭಾನುವಾರ ಅರಣಿ ಮಥನದ ಮೂಲಕ ಯಾಗಕ್ಕೆ ಅಗ್ನಿಯನ್ನು ಸೃಷ್ಟಿಸಲಾಯಿತು. ಹಲವು ಮಂದಿ ಋತ್ವಿಜರು ಯಾಗದಲ್ಲಿ ಪಾಲ್ಗೊಳ್ಳುತ್ತಿದ್ದು, ಸೆ. 6ರಂದು ಬೆಳಗೆಗ 11ಕ್ಕೆ ಯಾಗದ ಪೂರ್ಣಾಹುತಿ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಅಂದು ಬೆಳಗ್ಗೆ 10.30ಕ್ಕೆ ಯಾಗ ಮಹತ್ವದ ಕುರಿತು ವಿದ್ವಾನ್ ಪಂಜ ಭಾಸ್ಕರ ಭಟ್ ಅವರಿಂದ ವಿಶೇಷ ಉಪನ್ಯಾಸ ನಡೆಯಲಿರುವುದು.


