ಕಾಸರಗೋಡು: ನಗರದ ಇತಿಹಾಸ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಜರುಗಲಿರುವ 71 ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮಕ್ಕೆ ಚಪ್ಪರ ಮುಹೂರ್ತ ದೇವಸ್ಥಾನ ವಠಾರದಲ್ಲಿ ನೆರವೇರಿತು. ಶ್ರೀದೇವರಿಗೆ ಪ್ರಾರ್ಥನೆ ಸಲ್ಲಿಸಿದ ನಂತರ ಚಪ್ಪರ ಮುಹೂರ್ತ ನೆರವೇರಿಸಲಾಯಿತು.
ಚಪ್ಪರ ಸಮಿತಿಯ ಪ್ರಮುಖರಾದ ಲವ ಮೀಪುಗುರಿ, ಉಪಾಧ್ಯಕ್ಷ ಲಕ್ಷ್ಮೀಕಾಂತ ನೆಲ್ಲಿಕುಂಜೆ, ರವಿಕೇಸರಿ, ಕೋಶಾಧಿಕಾರಿ ಉಪೇಂದ್ರ ಆಚಾರ್ಯ ಜತೆ ಕಾರ್ಯದರ್ಶಿ ರವಿ ಕೇಳುಗುಡ್ಡೆ, ಸಮಿತಿಯ ಹಿರಿಯ ಸದಸ್ಯರಾದ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ಗೋಪಾಲಕೃಷ್ಣ ಭಂಡಾರಿ, ಕಿಶೋರ್ ಎಸ್.ವಿ.ಟಿ ಮೊದಲಾದವರು ಉಪಸ್ಥಿತರಿದ್ದರು.


