ಕಾಸರಗೋಡು: ಪಾಡಿಬೆಳ್ಳೂರು ನಗರದ ಇಮ್ರಾನ್ ವಳಪ್ಪು ನಿವಾಸಿ ಡಿ. ಗೋಪಾಲನ್ ನಾಯರ ಅವರ ಪತ್ನಿ ದಾಕ್ಷಾಯಿಣಿ ಅಮ್ಮ (78) ನಾಪತ್ತೆಯಾಗಿರುವ ಬಗ್ಗೆ ವಿದ್ಯಾನಗರ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಹೃದಯ ಸಂಬಂಧ ಕಾಯಿಲೆ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದ ಇವರು ಸೋಮವಾರ ರಾತ್ರಿ ಮನೆಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಮನೆಯವರು ನೀಡಿದ ಮಾಹಿತಿಯಂತೆ ಕಾಸರಗೋಡು ಅಗ್ನಿಶಾಮಕದಳ ಸ್ಥಳಕ್ಕೆ ಆಗಮಿಸಿ ಮನೆ ಆಸುಪಾಸಿನ ಮೂರು ಕೆರೆಗಳಲ್ಲಿ ಸ್ಕೂಬಾ ಸಹಾಯದಿಂದ ಶೋಧ ನಡೆಸಿದರೂ ಇವರ ಪತ್ತೆ ಸಾಧ್ಯವಾಗಿರಲಿಲ್ಲ. ಮನೆಯವರು ನೀಡಿದ ದೂರಿನನ್ವಯ ವಿದ್ಯಾನಗರ ಠಾಣೆ ಪೆÇಲೀಸರು ತನಿಖೆ ಆರಂಭಿಸಿದ್ದಾರೆ.


