HEALTH TIPS

Asian Games | ಬಾಕ್ಸಿಂಗ್ : ಅಂಕುಶ್, ಪರ್ವಿನ್ ಫೈನಲ್‌ಗೆ ; ಕನಿಷ್ಠ 2 ಬೆಳ್ಳಿ ಪದಕ ಖಚಿತ

ನಗೋಯ: ಏಶ್ಯನ್ ಗೇಮ್ಸ್‌ನಲ್ಲಿ, ಮಂಗಳವಾರ ಪುರುಷರ ಬಾಕ್ಸಿಂಗ್ 80 ಕೆಜಿ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಅಂಕುಶ್ ಪಂಘಲ್ ಉಝ್ಬೆಕಿಸ್ತಾನದ ಫಜ್ಲಿದ್ದೀನ್ ಎರ್ಕಿನ್‌ಬೋವ್ ವಿರುದ್ಧ 4-1 ಅಂಕಗಳ ಅಂತರದಿಂದ ಜಯಗಳಿಸಿ ಪೈನಲ್ ಪ್ರವೇಶಿಸಿದ್ದಾರೆ. ಭಾರತಕ್ಕೆ ಈ ಸ್ಪರ್ಧೆಯಲ್ಲಿ ಕನಿಷ್ಠ ಬೆಳ್ಳಿ ಪದಕ ಖಚಿತವಾಗಿದೆ. 

ಎರ್ಕಿನ್‌ಬೋವ್ 75 ಕೆಜಿ ವಿಭಾಗದ ಹಾಲಿ ವಿಶ್ವ ಚಾಂಪಿಯನ್ ಆಗಿದ್ದಾರೆ.


ಶುಕ್ರವಾರ ನಡೆಯಲಿರುವ ಚಿನ್ನದ ಪದಕದ ಹಣಾಹಣಿಯಲ್ಲಿ ಅವರು ದಕ್ಷಿಣ ಕೊರಿಯದ ಕಿಮ್ ಮಿನ್‌ಸೆಯೊಂಗ್‌ರನ್ನು ಎದುರಿಸಲಿದ್ದಾರೆ. ಕಿಮ್ ಇನ್ನೊಂದು ಸೆಮಿಫೈನಲ್‌ನಲ್ಲಿ ಜೋರ್ಡಾನ್‌ನ ಹುಸೇನ್ ಇಶೈಶ್ ವಿರುದ್ಧ 5-0 ಅಂತರದಲ್ಲಿ ಗೆಲುವು ಸಾಧಿಸಿದರು.

ಏಶ್ಯನ್ ಗೇಮ್ಸ್‌ನಲ್ಲಿ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವ ಅಂಕುಶ್, ಕ್ವಾರ್ಟರ್‌ಫೈನಲ್‌ನಲ್ಲಿ ತಜಕಿಸ್ತಾನದ ನೆಕ್ರೂಜ್ ಸಲಿಮೋವ್ ವಿರುದ್ಧ 5-0 ಅಂತರದ ಜಯ ಗಳಿಸಿದ್ದರು. ಆ ಮೂಲಕ ಈಗಾಗಲೇ ಕಂಚಿನ ಪದಕವನ್ನು ಖಚಿತಪಡಿಸಿಕೊಂಡಿದ್ದರು. ಈ ಗೆಲುವಿನೊಂದಿಗೆ ಅವರ ಪದಕದ ಬಣ್ಣ ಈಗ ಕನಿಷ್ಠ ಬೆಳ್ಳಿಗೆ ಏರಿಕೆಯಾಗಿದೆ.

ಬಾಕ್ಸಿಂಗ್ ಸ್ಪರ್ಧೆಯ ಮಹಿಳಾ 65 ಕೆಜಿ ವಿಭಾಗದಲ್ಲಿ ಮಂಗಳವಾರ ಭಾರತದ ಪರ್ವಿನ್ ಹೂಡಾ ಫೈನಲ್‌ ಗೆ ಲಗ್ಗೆಯಿಟ್ಟಿದ್ದಾರೆ.

ನಗೋಯದ ನಿಶಿಯೊ ಜಿಮ್ನಾಶಿಯಂನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅವರು ಚೀನಾದ ಲಿ ಶೂ ವಿರುದ್ಧ 5-0 ಅಂತರದ ಭರ್ಜರಿ ಜಯ ಸಾಧಿಸಿದರು.

26 ವರ್ಷದ ಪರ್ವಿನ್ ಶುಕ್ರವಾರ ನಡೆಯಲಿರುವ ಫೈನಲ್‌ನಲ್ಲಿ ಚೈನೀಸ್ ತೈಪೆಯ ಚೆನ್ ನಿಯೆನ್-ಚಿನ್ ಅವರನ್ನು ಎದುರಿಸಲಿದ್ದಾರೆ.

ತಾನಿರುವ ಸ್ಥಳದ ವಿವರಗಳನ್ನು ಒದಗಿಸದ ಕಾರಣಕ್ಕಾಗಿ 2022ರ ಹಾಂಗ್‌ಝೂ ಏಶ್ಯನ್ ಗೇಮ್ಸ್‌ನ ಕಂಚಿನ ಪದಕವನ್ನು ಕಳೆದುಕೊಂಡಿದ್ದ ಪರ್ವಿನ್‌ಗೆ ಈ ಸರಣಿಯು ಗೌರವವನ್ನು ಮರಳಿ ಗಳಿಸುವ ಮಹತ್ವದ ಹಾದಿಯಾಗಿದೆ. ಇದೀಗ ಅವರು ಚಿನ್ನದ ಪದಕಕ್ಕಾಗಿ ಕಣಕ್ಕಿಳಿಯಲಿದ್ದಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries