HEALTH TIPS

Asian Games | ಪುರುಷರ ಹಾಕಿ: ಕೊರಿಯ ವಿರುದ್ಧ ಭಾರತಕ್ಕೆ 8-2 ಅಂತರದ ಜಯ

ನಗೋಯ: ಏಶ್ಯನ್ ಗೇಮ್ಸ್‌ನ ಪುರುಷರ ಹಾಕಿ ವಿಭಾಗದ ಗುಂಪು ಹಂತದ ಪಂದ್ಯವೊಂದರಲ್ಲಿ ಗುರುವಾರ ಭಾರತವು ದಕ್ಷಿಣ ಕೊರಿಯವನ್ನು 8-2 ಗೋಲುಗಳ ಭರ್ಜರಿ ಅಂತರದಿಂದ ಸೋಲಿಸಿದೆ. ಇದರೊಂದಿಗೆ ಭಾರತವು ಸತತ ಮೂರನೇ ಜಯ ಸಾಧಿಸಿದೆ ಹಾಗೂ 'ಎ' ಗುಂಪಿನಲ್ಲಿ ತನ್ನ ಅಗ್ರಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. 


ಗಿಫು ಪ್ರಿಫೆಕ್ಚರಲ್ ಗ್ರೀನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ದಿಲ್ಪ್ರೀತ್ ಸಿಂಗ್ ಮತ್ತು ಅಭಿಷೇಕ್ ತಲಾ ಎರಡು ಗೋಲುಗಳನ್ನು ಬಾರಿಸಿದರು. ಕ್ರೇಗ್ ಫುಲ್ಟನ್ ಮಾರ್ಗದರ್ಶನದ ಭಾರತ ತಂಡದ ಪರವಾಗಿ ಸುಖ್ಜೀತ್ ಸಿಂಗ್, ಹರ್ಮನ್ಪ್ರೀತ್ ಸಿಂಗ್, ರಾಜಿಂದರ್ ಸಿಂಗ್ ಮತ್ತು ಶಿಲಾನಂದ್ ಲಾಕ್ರಾ ತಲಾ ಒಂದು ಗೋಲು ಬಾರಿಸಿದರು.

ದಕ್ಷಿಣ ಕೊರಿಯ ಪರವಾಗಿ ಕಿಮ್ ಜೇಹೋ ಮತ್ತು ಕಿಮ್ ಯೊಂಗ್ಬೊಕ್ ಗೋಲುಗಳನ್ನು ಗಳಿಸಿದರು.

ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಭಾರತ, ಮೊದಲಾರ್ಧದಲ್ಲೇ ಬೃಹತ್ ಮುನ್ನಡೆ ಸಾಧಿಸಿತು. ಆರಂಭಿಕ 15 ನಿಮಿಷಗಳಲ್ಲಿ ಭಾರತ ನಾಲ್ಕು ಗೋಲುಗಳನ್ನು ಗಳಿಸಿತು. ಈ ಪೈಕಿ ಕೇವಲ ಒಂದು ಗೋಲು ಮಾತ್ರ ಪೆನಾಲ್ಟಿ ಕಾರ್ನರ್ ಮೂಲಕ ಬಂದಿದೆ.

ಇದೇ ಲಯವನ್ನು ಎರಡನೇ ಕ್ವಾರ್ಟರ್ನಲ್ಲೂ ಮುಂದುವರಿಸಿದ ಭಾರತ, ತನ್ನ ಆಕ್ರಮಣವನ್ನು ಇನ್ನಷ್ಟು ಹೆಚ್ಚಿಸಿ ಇನ್ನೂ ಎರಡು ಗೋಲುಗಳನ್ನು ದಾಖಲಿಸಿತು.

ಆದರೆ, ದ್ವಿತೀಯಾರ್ಧದಲ್ಲಿ ಚೇತರಿಸಿಕೊಂಡ ದಕ್ಷಿಣ ಕೊರಿಯ ಎರಡು ಗೋಲುಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು. ಪಂದ್ಯದ ಕೊನೆಯ ಹಂತದಲ್ಲಿ ಭಾರತ ತನ್ನ ಆಕ್ರಮಣಕಾರಿ ಲಯವನ್ನು ಕಾಯ್ದುಕೊಳ್ಳಲು ಕೊಂಚ ಪರದಾಡುವುದು ಕಂಡುಬಂತು. ಮುಖ್ಯವಾಗಿ ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ಅದು ಹಿನ್ನಡೆ ಅನುಭವಿಸಿತು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries