HEALTH TIPS

ಪಶ್ಚಿಮ ಬಂಗಾಳದಲ್ಲಿ ₹1 ಲಕ್ಷ ಕೋಟಿ ಹೂಡಿಕೆಗೆ ಅದಾನಿ ನಿರ್ಧಾರ

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ 2035ರ ವೇಳೆಗೆ ₹1 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ ಮಾಡಲಾಗುವುದು ಎಂದು ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್‌ ಅದಾನಿ ಅವರು ಗುರುವಾರ ಘೋಷಿಸಿದ್ದಾರೆ.


ಕೋಲ್ಕತ್ತದಲ್ಲಿ 2,000 ಹಾಸಿಗೆಗಳ 'ಅದಾನಿ ಆರೋಗ್ಯ ಮಂದಿರ' ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರೊಂದಿಗೆ ಶಂಕುಸ್ಥಾಪನೆ ಮಾಡಿದ ಬಳಿಕ ಮಾತನಾಡಿದ ಅದಾನಿ, ಸಂಸ್ಥೆಯು ಈ ಆಸ್ಪತ್ರೆಗಾಗಿ ₹4,000 ಕೋಟಿ ಖರ್ಚು ಮಾಡಲಿದೆ. 

ಜತೆಗೆ, ಈ ಯೋಜನೆಯು 10,000 ಉದ್ಯೋಗಗಳನ್ನು ಸೃಷ್ಟಿಸುತ್ತದೆ' ಎಂದರು.

'ಆಸ್ಪತ್ರೆಯಲ್ಲಿನ ಅರ್ಧದಷ್ಟು ಹಾಸಿಗೆಗಳು ಲಾಭರಹಿತ ಉದ್ದೇಶದಿಂದ ಕೂಡಿದ್ದು, ರಾಜ್ಯ ಮತ್ತು ಕೇಂದ್ರ ಆರೋಗ್ಯ ವಿಮಾ ಯೋಜನೆಗಳ ಅಡಿಯಲ್ಲಿ ಅರ್ಹರಾಗಿರುವ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಿಡಲಾಗುವುದು. ಈ ಸೌಲಭ್ಯವು ಸಂಶೋಧನೆ ಮತ್ತು ಆರೈಕೆ ಮೂಲಸೌಕರ್ಯಗಳೊಂದಿಗೆ ವೈದ್ಯಕೀಯ ಕಾಲೇಜನ್ನು ಹೊಂದಿರುತ್ತದೆ' ಎಂದು ಅವರು ಹೇಳಿದರು.

'ರಾಜ್ಯದಲ್ಲಿ ಬಂದರುಗಳು, ವಿದ್ಯುತ್‌ ಉತ್ಪಾದನೆ, ವಿದ್ಯುತ್‌ ಪ್ರಸರಣ ಮತ್ತು ವಿತರಣೆ, ರಸ್ತೆಗಳು, ಸೇತುವೆಗಳು, ರೋಪ್‌ವೇ, ಪರಿಸರಸ್ನೇಹಿ ಸಿಮೆಂಟ್‌ ಸೇರಿದಂತೆ ಹೈಪರ್‌ಸ್ಕೇಲ್‌ ಡೇಟಾ ಕೇಂದ್ರಗಳ ಮೇಲೆ ಹೂಡಿಕೆ ಮಾಡಲಾಗುವುದು' ಎಂದರು.

'ರಾಜ್ಯವು ಏಷ್ಯಾದ ಶ್ರೇಷ್ಠ ಸಮಗ್ರ ಕೈಗಾರಿಕಾ ಮತ್ತು ಆರ್ಥಿಕ ವೇದಿಕೆಗಳಲ್ಲಿ ಒಂದಾಗುವ ಸಾಮರ್ಥ್ಯವನ್ನು ಹೊಂದಿದೆ. ಪಶ್ಚಿಮ ಬಂಗಾಳವು ಅದಾನಿ ಸಂಸ್ಥೆಯ ಎರಡನೇ ಕರ್ಮಭೂಮಿಯಾಗಲಿದೆ' ಎಂದು ಹೇಳಿದರು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries