HEALTH TIPS

Assam | ವ್ಯಾಪಕ ದಾಳಿ ಕಾರ್ಯಾಚರಣೆ; ವಂಚನೆ ಕೃತ್ಯಗಳಲ್ಲಿ ತೊಡಗಿದ್ದ 330 ಜನರು ವಶಕ್ಕೆ

ಗುವಾಹಟಿ: ಅಸ್ಸಾಂ ಪೊಲೀಸರು ರಾಜ್ಯಾದ್ಯಂತ ನಡೆಸಿದ ವ್ಯಾಪಕ ಕಾರ್ಯಾಚರಣೆಯಲ್ಲಿ ವಂಚಕರು, ಸುಲಿಗೆಕೋರರು ಮತ್ತು ಮಧ್ಯವರ್ತಿಗಳು ಸೇರಿದಂತೆ ಸುಮಾರು 330 ಶಂಕಿತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.


ಕಾರ್ಯಾಚರಣೆಯು ಶನಿವಾರ ನಸುಕಿನ ಮೂರು ಗಂಟೆಯ ಸುಮಾರಿಗೆ ಆರಂಭಗೊಂಡಿತ್ತು.

ಪೊಲೀಸರು ಅಥವಾ ಸರಕಾರಿ ಅಧಿಕಾರಿಗಳಂತೆ ನಟಿಸಿ ಜನರಿಗೆ ಬೆದರಿಕೆಯೊಡ್ಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ವಂಚಕರ ಬಗ್ಗೆ ಪೊಲೀಸರು ಗುಪ್ತಚರ ಮಾಹಿತಿ ಕಲೆಹಾಕುತ್ತಿದ್ದರು. ಕೆಲವು ಶಂಕಿತರು ಪೊಲೀಸ್ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಸಂಪರ್ಕಿಸಿ, ಹಣಕ್ಕಾಗಿ ಆ ವಿಷಯಗಳನ್ನು ಇತ್ಯರ್ಥಪಡಿಸುವುದಾಗಿ ಭರವಸೆ ನೀಡುತ್ತಿದ್ದರು ಎಂದು ಅಸ್ಸಾಂ ಪೊಲೀಸ್ ಮಹಾನಿರ್ದೇಶಕ ಹರ್ಮೀತ್ ಸಿಂಗ್ ಅವರು ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದಲ್ಲಿ ಸಂಘಟಿತ ಗುಂಪುಗಳು ಕಾರ್ಯನಿರ್ವಹಿಸುತ್ತಿರುವ ಸುಳಿವುಗಳು ತನಿಖಾಧಿಕಾರಿಗಳಿಗೆ ಸಿಕ್ಕಿವೆ. ವಶಕ್ಕೆ ಪಡೆದವರಲ್ಲಿ ಕೆಲವರು ವಕೀಲರಂತೆ ನಟಿಸಿದರೆ ಇತರರು ಪೊಲೀಸ್ ಅಧಿಕಾರಿಗಳು ಅಥವಾ ಸರಕಾರಿ ಅಧಿಕಾರಿಗಳೆಂದು ಹೇಳಿಕೊಳ್ಳುತ್ತಿದ್ದರು ಎಂದು ತಿಳಿಸಿದ ಸಿಂಗ್, ಜನರ ವಿಶ್ವಾಸ ಗಳಿಸಲು ಮತ್ತು ಹಣವನ್ನು ವಂಚಿಸಲು ವ್ಯಕ್ತಿಗಳು ಸರಕಾರಿ ಇಲಾಖೆಗಳು ಮತ್ತು ಅಧಿಕಾರಿಗಳ ಹೆಸರುಗಳನ್ನು ಬಳಸಿಕೊಂಡಿರುವ ನಿದರ್ಶನಗಳಿವೆ ಎಂದರು.

ಸುಲಿಗೆ ಆರೋಪಗಳು ಮತ್ತು ಜನರ ಪರವಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿ ಅವರನ್ನು ಪೊಲೀಸ್ ಠಾಣೆಗಳಿಂದ ದೂರವಿಡುವ ಪ್ರಯತ್ನಗಳ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries