HEALTH TIPS

ವಿಧಾನಸಭೆಯ ಆವರಣದಲ್ಲಿ ರಾಜಾರೋಷವಾಗಿ ಸುತ್ತಾಟ, ಲಕ್ಷಾಂತರ ರೂ. ವಂಚನೆ: ನಕಲಿ ಐಎಎಸ್ ಅಧಿಕಾರಿ ತೃಪ್ತಿ ಸಿಂಗ್ ವಂಚನೆಯ ಜಾಡು ಹಿಡಿದ ಪೊಲೀಸರು

ಭೋಪಾಲ್: ಮಧ್ಯಪ್ರದೇಶಲ್ಲಿ ಐಎಎಸ್‌ ಅಧಿಕಾರಿ ಎಂದು ಹೇಳಿಕೊಂಡು ಜನರಿಗೆ ಲಕ್ಷಾಂತರ ರೂ. ವಂಚನೆ ಆರೋಪದಲ್ಲಿ ತೃಪ್ತಿ ಸಿಂಗ್ ರಜಪೂತ್ ಎಂಬಾಕೆಯನ್ನು ಮಧ್ಯಪ್ರದೇಶದ ಅಶೋಕ್‌ನಗರ ಜಿಲ್ಲೆಯ ಚಂದೇರಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ವಿಧಾನಸಭೆಯಲ್ಲಿ ರಾಜಾರೋಷವಾಗಿ ಸುತ್ತಾಟದಿಂದ ಹಿಡಿದು ಐಎಎಸ್ ಅಧಿಕಾರಿ ಎಂದು ಹೇಳಿಕೊಂಡು ಈಕೆ ಮಾಡಿರುವ ವಂಚನೆಯ ಜಾಡು ಹಿಡಿದು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ ಎಂದು iಟಿಜiಚಿಟಿexಠಿಡಿess.ಛಿom ವರದಿ ಮಾಡಿದೆ. 


ತೃಪ್ತಿ ಸಿಂಗ್ ರಜಪೂತ್ ವೀಡಿಯೋ ವೈರಲ್‌:

ತೃಪ್ತಿ ಸಿಂಗ್ ರಜಪೂತ್ ಗೆ ಸಂಬಂಧಿಸಿದ ವಿಡಿಯೊ ಮೊದಲು ವೈರಲ್‌ ಆಗಿದೆ. ವಿಡಿಯೋ ಆರಂಭದಲ್ಲಿ ಗುಲಾಬಿ ಬಣ್ಣದ ಸೀರೆ ಹಾಗೂ ಬಿಳಿ ರವಕೆ ಧರಿಸಿರುವ ಯುವತಿಯೊಬ್ಬರು ಕ್ಯಾಮೆರಾ ಎದುರು ಆತ್ಮವಿಶ್ವಾಸದಿಂದ ಮಾತನಾಡುತ್ತಾರೆ. "ನಾವು ಮಧ್ಯಪ್ರದೇಶ ವಿಧಾನಸಭೆಗೆ ಬಂದಿದ್ದೇವೆ. ಒಳಗೆ ಫೋಟೋ ತೆಗೆಯಲು ಅನುಮತಿ ಇಲ್ಲ. ಹಾಗಾಗಿ ಹೊರಗೆ ಈ ವೀಡಿಯೊ ಮಾಡುತ್ತಿದ್ದೇವೆ" ಎಂದು ಹೇಳುತ್ತಾ ಕ್ಯಾಮೆರಾವನ್ನು ತನ್ನ ಜೊತೆಗಿದ್ದವರತ್ತ ತಿರುಗಿಸುತ್ತಾರೆ. ಆಗ ಗುಲಾಬಿ ಬಣ್ಣದ ಉಡುಪು ಧರಿಸಿರುವ ಮತ್ತೊಬ್ಬ ಯುವತಿ ಹಾಗೂ ಕೆಂಪು ಸೀರೆ ಧರಿಸಿರುವ ಯುವತಿ ಕ್ಯಾಮೆರಾ ಮುಂದೆ ಬರುತ್ತಾರೆ. ಈ ವೇಳೆ ಕೆಂಪು ಸೀರೆ ಧರಿಸಿದ್ದ ಯುವತಿ, "ನಮ್ಮ ಚೇಷ್ಟೆಗಳನ್ನು ನೋಡಿದರೆ ನಾವು ಐಎಎಸ್ ಅಧಿಕಾರಿಗಳು ಎಂದು ಯಾರಿಗೂ ಅನಿಸುವುದಿಲ್ಲ" ಎಂದು ಹೇಳುತ್ತಾರೆ. ಬಳಿಕ ಮೂವರೂ ನಗುತ್ತಾರೆ.

ಆದರೆ ಪೊಲೀಸರ ತನಿಖೆಯಲ್ಲಿ ವಿಡಿಯೋದಲ್ಲಿನ ಯಾವುದೇ ಹೇಳಿಕೆ ನಿಜವಲ್ಲ ಎಂಬುದು ಬೆಳಕಿಗೆ ಬಂದಿದೆ. ಈ ಮಹಿಳೆಯರು ಐಎಎಸ್ ಅಧಿಕಾರಿಗಳಲ್ಲ. ಈ ವಿಡಿಯೊವನ್ನು ವಿಧಾನಸಭೆ ಆವರಣದಲ್ಲಿ ಚಿತ್ರೀಕರಿಸಲಾಗಿಲ್ಲ. ವಿಡಿಯೊವನ್ನು ವಿಧಾನಸಭೆಯ ಬದಲು ಆಂಥ್ರೊಪಾಲಾಜಿಕಲ್ ಮ್ಯೂಸಿಯಂ ಸಂಕೀರ್ಣದೊಳಗಿನ ಗ್ಯಾಲರಿಯೊಂದರಲ್ಲಿ ಚಿತ್ರೀಕರಿಸಲಾಗಿದೆ ಎಂದು ಭೋಪಾಲ್ ಪೊಲೀಸರು ತನಿಖೆಯ ವೇಳೆ ಪತ್ತೆ ಹಚ್ಚಿದ್ದಾರೆ.

ತನಿಖೆಯ ವೇಳೆ ವಿಡಿಯೊದಲ್ಲಿದ್ದ ಗುಲಾಬಿ ಬಣ್ಣದ ಉಡುಪು ಧರಿಸಿರುವ ಇಬ್ಬರು ಮಹಿಳೆಯರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕೆಂಪು ಸೀರೆ ಧರಿಸಿದ್ದ ಯುವತಿ ತನಗೆ ಐಎಎಸ್ ಅಧಿಕಾರಿಗಳಂತೆ ನಟಿಸುವಂತೆ ಸೂಚಿಸಿದ್ದರು ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.

ಪೊಲೀಸರ ತನಿಖೆಯಲ್ಲಿ ಆ ಕೆಂಪು ಸೀರೆ ಧರಿಸಿದ್ದ ಮಹಿಳೆಯನ್ನು ತೃಪ್ತಿ ಸಿಂಗ್ ರಜಪೂತ್ ಎಂದು ಗುರುತಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ವಿಡಿಯೋದಲ್ಲಿರುವ ಇಬ್ಬರು ಮಹಿಳೆಯರ ಪಾತ್ರದ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಐಎಎಸ್‌ ಅಧಿಕಾರಿ ಎಂದು ಲಕ್ಷಾಂತರ ರೂ. ವಂಚನೆ:

ವಿಡಿಯೋ ಕುರಿತು ತನಿಖೆ ನಡೆಸಿದಾಗ ಇದು ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಗಳಿಸುವ ಉದ್ದೇಶದ ರೀಲ್ ಗೆ ಸೀಮಿತವಾಗಿಲ್ಲ ಎಂಬುದು ಪೊಲೀಸರಿಗೆ ಮನವರಿಕೆಯಾಗಿದೆ. ತೃಪ್ತಿ ಸಿಂಗ್ ರಜಪೂತ್ ತನ್ನನ್ನು ಐಎಎಸ್‌ ಅಧಿಕಾರಿ ಮತ್ತು ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ನಿರ್ದೇಶಕಿ ಎಂದು ಹೇಳಿಕೊಂಡು ಜನರಿಗೆ ಸರಕಾರಿ ಉದ್ಯೋಗ, ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಆಸ್ತಿಗಳ ಗುತ್ತಿಗೆ ಹಾಗೂ ಅಧಿಕಾರಿಗಳೊಂದಿಗೆ ಸಂಪರ್ಕ ಕಲ್ಪಿಸುವುದಾಗಿ ಹಣ ಪಡೆದು ವಂಚನೆ ಮಾಡುತ್ತಿರುವುದು ಬಯಲಾಗಿದೆ.

ಮೂರು ಎಫ್‌ ಐಆರ್‌ ದಾಖಲು:

ಅಶೋಕನಗರ ಮತ್ತು ಭೋಪಾಲ್ ಪೊಲೀಸರು ಆಕೆಯ ವಿರುದ್ಧ ಮೂರು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಆಕೆಯನ್ನು ಆಗಸ್ಟ್ 23 ರಂದು ಅಶೋಕನಗರ ಜಿಲ್ಲೆಯ ಚಂದೇರಿ ಪೊಲೀಸರು ಆಕೆಯ ಸಹೋದರ ಸುಧಾಂಶು ಸಿಂಗ್ ಜೊತೆಗೆ ಬಂಧಿಸಿದ್ದರು.

ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಇಬ್ಬರು ಮಹಿಳೆಯರು ತಾವು ಕೂಡ ವಂಚನೆಗೆ ಬಲಿಯಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಐಎಎಸ್ ಅಧಿಕಾರಿಗಳನ್ನಾಗಿ ಮಾಡುವುದಾಗಿ ಭರವಸೆ ನೀಡಿ ಪ್ರತಿಯೊಬ್ಬರಿಂದ ತಲಾ 3 ಲಕ್ಷ ರೂಪಾಯಿಗಳನ್ನು ಅವರು ತೆಗೆದುಕೊಂಡಿದ್ದಾರೆ ಎಂದು ಭೋಪಾಲ್ ಡಿಸಿಪಿ ವಿಕಾಸ್ ಕುಮಾರ್ ಸಾಹ್ವಾಲ್ ಹೇಳಿದ್ದಾರೆ.

ಐಎಎಸ್‌ ಅಧಿಕಾರಿ ಎಂದು ಸುಳ್ಳು ಹೇಳಿ ವಿವಾಹ:

ರಜಪೂತ್ ಅವರ ಪತಿ ಕೂಡ ಆಕೆ ಐಎಎಸ್ ಅಧಿಕಾರಿಯಂತೆ ನಟಿಸುತ್ತಿದ್ದಳು ಎಂದು ಹೇಳಿಕೊಂಡಿದ್ದಾರೆ. ಇದೇ ಕಾರಣಕ್ಕೆ ನಾನು ಆಕೆಯನ್ನು ಮದುವೆಯಾಗಿದ್ದಾಗಿಯೂ ಆಕೆಯ ಪತಿ ಹೇಳಿದ್ದಾರೆ. ಅವರಿಬ್ಬರ ನಡುವೆ ಕೌಟುಂಬಿಕ ವಿವಾದ ನಡೆಯುತ್ತಿದೆ ಎಂದು ಡಿಸಿಪಿ ವಿಕಾಸ್ ಕುಮಾರ್ ಸಾಹ್ವಾಲ್ ಹೇಳಿದ್ದಾರೆ.

ರಜಪೂತ್ ನಿವಾಸದಲ್ಲಿ ಹಲವು ದಾಖಲೆಗಳು ಪತ್ತೆ:

ಮಧ್ಯಪ್ರದೇಶ ಪೊಲೀಸರು ಭೋಪಾಲ್‌ನಲ್ಲಿರುವ ರಜಪೂತ್ ನಿವಾಸದಲ್ಲಿ ಶೋಧಿಸಿದಾಗ, 30 ವರ್ಷದ ಆಕೆ ದೀರ್ಘಕಾಲದಿಂದ ಐಎಎಸ್ ಅಧಿಕಾರಿಯಂತೆ ಜನರನ್ನು ನಂಬಿಸುವಲ್ಲಿ ಯಶಸ್ವಿಯಾಗಲು ಹೇಗೆ ಒಂದು ನಕಲಿ ವಾತಾವರಣವನ್ನು ಸೃಷ್ಟಿಸಿದ್ದಳು ಎಂಬುದಕ್ಕೆ ಸಂಬಂಧಿಸಿದ ಹಲವು ದಾಖಲೆಗಳನ್ನು ಕಂಡು ಕೊಂಡಿದ್ದಾರೆ.

ಸರಕಾರಿ ಇಲಾಖೆಗೆ ಸೇರಿದ ಗುರುತಿನ ಚೀಟಿಗಳು, ಲೆಟರ್‌ಹೆಡ್‌ಗಳು, ನೇಮಕಾತಿ ಪತ್ರಗಳು, ಟ್ರೋಫಿಗಳು ಮತ್ತು ಸ್ಮರಣಿಕೆಗಳನ್ನು ವಶಪಡಿಸಿಕೊಂಡಿದ್ದಾರೆ. ಇದಲ್ಲದೆ "Government of India" ಎಂದು ಬರೆದಿರುವ ಟೊಯೋಟಾ ಇನೋವಾ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚಂದೇರಿಯಲ್ಲಿ ದಾಖಲಾಗಿದ್ದ ಮೊದಲ ಪ್ರಕರಣ:

ಚಂದೇರಿಯಲ್ಲಿ ರಜಪೂತ್ ವಿರುದ್ಧದ ಮೊದಲ ಪ್ರಕರಣ ಪೊಲೀಸರ ಗಮನಕ್ಕೆ ಬಂದಿತ್ತು. ಪೊಲೀಸರ ಪ್ರಕಾರ, 2025ರ ಏಪ್ರಿಲ್ 7ರಂದು ರಜಪೂತ್ ತಮ್ಮ ಸಹೋದರ ಹಾಗೂ ಇಬ್ಬರು ಸಹಚರರೊಂದಿಗೆ ಚಂದೇರಿಗೆ ಆಗಮಿಸಿದ್ದಳು. ಅವರು ಮಧ್ಯಪ್ರದೇಶ ಪ್ರವಾಸೋದ್ಯಮ ಇಲಾಖೆಯ ಕಿಲಾ ಕೋಠಿ ಹೋಟೆಲ್‌ನಲ್ಲಿ ತಂಗಿದ್ದರು. ಅಲ್ಲಿ ಆಕೆ ತಾನು ರಾಜ್ಯದ ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ನಿರ್ದೇಶಕಿ ಎಂದು ಸ್ಥಳೀಯರಿಗೆ ಪರಿಚಯಿಸಿಕೊಂಡು, ಸರಕಾರಿ ಉದ್ಯೋಗ ಕೊಡಿಸುವ ಕುರಿತು ಅಲ್ಲಿನ ನಿವಾಸಿಗಳೊಂದಿಗೆ ಮಾತುಕತೆ ನಡೆಸಿದ್ದಳು.

ರಜಪೂತ್ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಲ್ಲಿ ಉದ್ಯೋಗ ಕೊಡಿಸುತ್ತಾರೆಂದು ಅಲ್ಲಿ ನಾಲ್ವರು ನಂಬಿದ್ದರು. ಇದಕ್ಕಾಗಿ ಪ್ರತಿ ವ್ಯಕ್ತಿಯಿಂದ ಆಕೆ 3 ಲಕ್ಷ ರೂ. ಕೇಳಿದ್ದಳು. ನಾಲ್ವರು ಒಟ್ಟು 9.80 ಲಕ್ಷ ಹಣ ಹಾಗೂ ಮೂಲ ದಾಖಲೆಗಳನ್ನು ರಜಪೂತ್‌ಗೆ ನೀಡಿದ್ದರು. ಉದ್ಯೋಗ ದೊರೆತ ಬಳಿಕ ಇನ್ನೂ 2 ಲಕ್ಷ ರೂ. ನೀಡಬೇಕಿತ್ತು. ಆದರೆ ಉದ್ಯೋಗ ದೊರೆಯದಿದ್ದಾಗ, ಅವರು ಪ್ರಶ್ನಿಸಲು ಆರಂಭಿಸಿದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ವಂಚನೆ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿಯಲ್ಲಿ ರಜಪೂತ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಈಕೆ ನಕಲಿ ದಾಖಲೆಗಳನ್ನು ಹೇಗೆ ಸಂಗ್ರಹಿದ್ದಾಳೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಕಲಿ ದಾಖಲೆಗಳು ಹಾಗೂ ಇತರ ಸಾಮಗ್ರಿಗಳನ್ನು ಸಿದ್ಧಪಡಿಸಿ, ಅವುಗಳನ್ನು ರಜಪೂತ್‌ಗೆ ನೀಡಿದ ಇಬ್ಬರನ್ನು ನಾವು ಗುರುತಿಸಿದ್ದೇವೆ. ಈ ಪ್ರಕರಣದಲ್ಲಿ ಇನ್ನಷ್ಟು ಜನರ ಕೈವಾಡವಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ," ಎಂದು ಅಶೋಕ್‌ನಗರದ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಕುಮಾರ್ ಮಿಶ್ರಾ ಅವರು ಹೇಳಿದ್ದಾರೆ.

ಬಂಧನದ ಮೊದಲು ಲ್ಯಾಪ್ ಟಾಪ್ ಫೈಲ್‌ಗಳು ಡಿಲಿಟ್:

ಬಂಧನದ ಮೊದಲು ಲ್ಯಾಪ್ ಟಾಪ್ ನಿಂದ ರಜಪೂತ್ ಫೈಲ್‌ಗಳನ್ನು ಡಿಲಿಟ್‌ ಮಾಡಿರುವುದನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಲ್ಯಾಪ್ ಟಾಪ್ ಜೊತೆಗೆ ಫೋನ್ ದಾಖಲೆಗಳು ಮತ್ತು ಹಣಕಾಸಿನ ವಹಿವಾಟುಗಳನ್ನು ಕೂಡ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಆಕೆಯ ಭೋಪಾಲ್ ನಿವಾಸದಿಂದ ವಶಪಡಿಸಿಕೊಂಡ ವಸ್ತುಗಳಲ್ಲಿ ನಕಲಿ ಸಿಬಿಐ ಗುರುತಿನ ಚೀಟಿ ಕೂಡ ಸೇರಿತ್ತು. ಇದನ್ನು AI ಸಹಾಯದಿಂದ ರಚಿಸಲಾಗಿದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries