HEALTH TIPS

ಮಂಜೇಶ್ವರ ವಿಧಾನಸಭಾ ಮಂಡಲದ ಪರಿಶಿಷ್ಟ ಜಾತಿ ಉನ್ನತಿಗಳ ಅವಲೋಕನ ಸಭೆ

ಉಪ್ಪಳ: ಮಂಜೇಶ್ವರ ತಾಲೂಕು ಅಂಬೇಡ್ಕರ್ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಒಳಪಡಿಸಿದ ಪರಿಶಿಷ್ಟ ಜಾತಿ ಉನ್ನತಿಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅವಲೋಕನ ಸಭೆಯನ್ನು ಶಾಸಕ ಎಕೆಎಂ ಅಶ್ರಫ್‍ರ ನೇತೃತ್ವದಲ್ಲಿ ಉಪ್ಪಳದ ಶಾಸಕರ ಕಚೇರಿಯಲ್ಲಿ ನಡೆಸಲಾಯಿತು. ಒಂದು ಕೋಟಿ ರೂ.ನಂತೆ ಮಂಜೂರು ಮಾಡಿದ ಮಂಗಲ್ಪಾಡಿ ಪಂಚಾಯತಿಯ ಪುಳಿಕುತ್ತಿ ಎಸ್‍ಸಿ ಉನ್ನತಿ, ಪುತ್ತಿಗೆ ಪಂಚಾಯತಿಯ  ಬಾಡೂರು ಎಸ್‍ಸಿ ಉನ್ನತಿ, ಕಟ್ಟತ್ತಡ್ಕ ಎಸ್‍ಸಿ ಉನ್ನತಿ, ಪೈವಳಿಕೆ ಪಂಚಾಯತಿಯ ಏದಾರ್ ಎಸ್‍ಸಿ ಉನ್ನತಿಗಳ ಅಭಿವೃದ್ಧಿ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.


ನಿರ್ಮಾಣ ಕಾಮಗಾರಿಗಳು ಪೂರ್ತಿಯಾದ ಬಾಡೂರು, ಪುಳಿಕುತ್ತಿ ಉನ್ನತಿಗಳಲ್ಲಿ ಅಂತಿಮ ಹಂತದ ಕಾಮಗಾರಿಗಳನ್ನು ಕೂಡಲೇ ಪೂರ್ತಿಗೊಳಿಸಲು, ಸಂಬಂಧಪಟ್ಟ ಅಧಿಕಾರಿಗಳು ಉನ್ನತಿಗಳಿಗೆ ನೇರವಾಗಿ ತಲುಪಿ ಅವಲೋಕನ ನಡೆಸಿ ಶೀಘ್ರವೇ ಉದ್ಘಾಟಿಸಲು ತೀರ್ಮಾನಿಸಲಾಯಿತು. ಶಾಸಕ ಎಕೆಎಂ ಅಶ್ರಫ್ ಅದ್ಯಕ್ಷತೆ ವಹಿಸಿದ್ದು, ಪುತ್ತಿಗೆ ಪಂ. ಅಧ್ಯಕ್ಷೆ ಫಿದಾ ಊಜಂಪದವು, ಪೈವಳಿಕೆ ಪಂ. ಉಪಾಧ್ಯಕ್ಷ ರಾಘವೇಂದ್ರ ಭಟ್, ಬ್ಲಾಕ್ ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮೋಹನ ರೈ ಕೆ, ಕೇಶವ ಪುತ್ತಿಗೆ, ಬಿ.ಎಂ. ಹಮೀದ್ ಬಾಡೂರು, ಹಮೀದ್ ಹಾಜಿ, ಸೈದ ಪೈವಳಿಕೆ, ನಾರಾಯಣ, ಸೈದ, ಝಡ್.ಎ. ಕಯ್ಯಾರ್, ನಾರಾಯಣ, ತಿರುಮಲೇಶ್ವರ್, ಶರತ್ ಟಿ, ಬಿಂದು ವಿ.ವಿ, ಧೀರಜ್ ಎಸ್.ಎಸ್, ಬಿಂದು ಎಂ, ಕುಂಞÂಕೃಷ್ಣನ್, ವತ್ಸನ್ ಕೆ.ಟಿ., ಶಾನಿದ್ ಕಯ್ಯಂಕೂಡ್ಲು, ದಿವಾಕರ ಬಾಡೂರು ಮಾತನಾಡಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries