ಕಾಸರಗೋಡು : ಒಂದು ಸಂಸ್ಥೆಯು ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಅದಕ್ಕೆ ಆ ಸಂಸ್ಥೆಯಲ್ಲಿರುವ ಎಲ್ಲರ ಒಮ್ಮತ ಮತ್ತು ಒಗ್ಗಟ್ಟಿನ ಪರಿಶ್ರಮದ ಅಗತ್ಯವಿದೆ. ಕಾಸರಗೋಡು ಕೋ. ಆಪ್. ಟೌನ್ ಬ್ಯಾಂಕ್ ಇಂದು ಅಭಿವೃದ್ಧಿಯ ಪಥದಲ್ಲಿದೆ. ಇದಕ್ಕೆ ಪ್ರಧಾನ ಕಾರಣ ಬ್ಯಾಂಕ್‌ನ ಸದಸ್ಯರು, ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿಗಳು, ಆಡಳಿತವರ್ಗದ ಸಾಮೂಹಿಕ ಪ್ರಯತ್ನವಾಗಿದೆ ಎಂದು ಕಾಸರಗೋಡು ಕೋ ಆಪ್ ಟೌನ್ ಬ್ಯಾಂಕ್‌ನ ಆಡಳಿತ ಮಂಡಳಿಯ ಚೆಯರ್ ಮ್ಯಾನ್ ನ್ಯಾಯವಾದಿ ಕರುಣಾಕರನ್ ನಂಬ್ಯಾರ್ ತಿಳಿಸಿದ್ದಾರೆ.
ಬ್ಯಾಂಕ್‌ನ ಶತಮಾನೋತ್ಸವ ಸಭಾಂಗಣದಲ್ಲಿ ನಡೆದ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಈ ಬ್ಯಾಂಕ್‌ಗೆ ನೂರು ವರ್ಷಗಳ ಇತಿಹಾಸವಿದೆ. ಅದನ್ನು ಸಂರಕ್ಷಿಸಿಕೊಂಡು ಸಂಸ್ಥೆಯನ್ನು ಅಭಿವೃದ್ದಿಯತ್ತ ಮುನ್ನಡೆಸಲು ನಾವೆಲ್ಲರೂ ಒಗ್ಗಟ್ಟಿನಿಂದ ಕಟಿಬದ್ಧರಾಗಬೇಕು ಎಂದವರು ಹೇಳಿದರು. ಇದೇ ವೇಳೆ ಬ್ಯಾಂಕ್‌ನ ಆಯ ವ್ಯಯ ವರದಿಯನ್ನು ಅವರು ಮಂಡಿಸಿದರು. ವೈಸ್ ಚೆಯರ್ ಮ್ಯಾನ್ ಮಹಾಬಲ ರೈ, ಬ್ಯಾಂಕ್‌ನ ನಿರ್ದೇಶಕರು ಉಪಸ್ಥಿತರಿದ್ದರು. ಬ್ಯಾಂಕ್‌ನ ಎ ಶ್ರೇಣಿಯ ಸದಸ್ಯರು, ನಿಕಟ ಪೂರ್ವ ಆಡಳಿತಾಧಿಕಾರಿಗಳು, ಸಿಬ್ಬಂದಿ ವರ್ಗ, ಪಿಗ್ಮಿ ಸಂಗ್ರಹಕಗಾರರು ಪಾಲ್ಗೊಂಡರು. ಬ್ಯಾಂಕ್‌ನ ಪ್ರಭಾರಿ ಜಿಎಂ ನಿಷಾ ಪಿ. ಎನ್. ಸ್ವಾಗತಿಸಿ, ಮ್ಯಾನೇಜರ್ ಕಿರಣ್ ಚಂದ್ರ ಕೆ.ಎಸ್. ವಂದಿಸಿದರು. ಮ್ಯಾನೇಜರ್ ದಿನೇಶ್ ನಾಗರಕಟ್ಟೆ ವಂದೇ ಮಾತರಂ ಹಾಡಿದರು.

