ಬದಿಯಡ್ಕ: ಬಾಲಗೋಕುಲ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ವತಿಯಿಂದ ಬದಿಯಡ್ಕ ಶ್ರೀ ಗಣೇಶ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಶುಕ್ರವಾರ ಜರಗಿತು. ಬೆಳಗ್ಗೆ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ವಠಾರದಿಂದ ರಾಧಾಕೃಷ್ಣ ವೇಷದೊಂದಿಗೆ ಭವ್ಯ ಶೋಭಾಯಾತ್ರೆ ನಡೆಯಿತು. ನೂರಾರು ಮಂದಿ ಮಕ್ಕಳು ಪಾಲಕರೊಂದಿಗೆ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಪುಟಾಣಿ ಮಕ್ಕಳಿಗಾಗಿ ಮುದ್ದು ಕೃಷ್ಣ ಸ್ಪರ್ಧೆ, ಭಗವದ್ಗೀತೆ ಪಠಣ, ರಂಗೋಲಿ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮೆರವಣಿಗೆಯುದ್ದಕ್ಕೂ ಮಕ್ಕಳ ಭಜನೆ, ಚೆಂಡೆ ಮೇಳ ಹಾಗೂ ಚೆಂಡೆ ವಾದನಗಳು ಜನ್ಮಾಷ್ಟಮಿ ಉತ್ಸವದ ವೈಭವವನ್ನು ಇಮ್ಮಡಿಗೊಳಿಸಿದವು. ನೂರಾರು ಪುಟಾಣಿ ಮಕ್ಕಳು ಕೃಷ್ಣ ಮತ್ತು ರಾಧೆಯರ ಬಣ್ಣ ಬಣ್ಣದ ವೇಷಭೂಷಣಗಳಲ್ಲಿ ಕಂಗೊಳಿಸಿ ನೆರೆದಿದ್ದ ಸಾರ್ವಜನಿಕರ ಮನ ಸೆಳೆಯಿತು. ಮಂದಿರದಲ್ಲಿ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನೆರವೇರಿದವು.

.jpg)
.jpg)
.jpg)
