HEALTH TIPS

ಸ್ಪ್ಯಾಮ್‌ ಕರೆ: ನಿಯಮ ಬಿಗಿಗೊಳಿಸಿದ ಟ್ರಾಯ್‌

ನವದೆಹಲಿ: ಅನಪೇಕ್ಷಿತ ವಾಣಿಜ್ಯ ಕರೆಗಳು (ಯುಸಿಸಿ), ಪಠ್ಯ ಸಂದೇಶ ಮತ್ತು ಸ್ವಯಂಚಾಲಿತ ಸಂವಹನಗಳನ್ನು ತಡೆಯಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಸ್ಪ್ಯಾಮ್‌ ವಿರೋಧಿ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಿದೆ.


ಶಂಕಿತ ಸ್ಪ್ಯಾಮ್‌ ಕರೆಗಳನ್ನು ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನ ಆಧರಿಸಿ ಪತ್ತೆ ಹೆಚ್ಚುವ ವ್ಯವಸ್ಥೆ ಅಭಿವೃದ್ಧಿಪಡಿಸಲಾಗಿದೆ.

ಗ್ರಾಹಕರಿಗೆ 'ಯುಸಿಸಿ' ವಿರುದ್ಧ ದೂರು ನೀಡಲು ಗ್ರಾಹಕ ಮೇಲ್ಮನವಿ ಕಾರ್ಯವಿಧಾನವನ್ನೂ ಪರಿಚಯಿಸಲಾಗಿದೆ. ಸ್ಪ್ಯಾಮ್‌ ವಿರೋಧಿ ಕರೆ ನಿರ್ವಹಣಾ ಅಪ್ಲಿಕೇಷನ್‌ಗಳನ್ನೂ ನಿಷೇಧಿಸಲಾಗಿದೆ.

ದೂರವಾಣಿ ಕಂಪನಿಗಳು ಸ್ಪ್ಯಾಮ್‌ ಕರೆ ಮಾಡುವರ ಡೇಟಾವನ್ನು ಪತ್ತೆಹಚ್ಚುವುದು, ಅಂತಹ ಸಂಖ್ಯೆಗಳನ್ನು ಪರಸ್ಪರ ಹಂಚಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಶಂಕಿತ ಸ್ಪ್ಯಾಮ್‌ ಕರೆ ಪ್ರಕರಣಗಳಲ್ಲಿ ಕೆವೈಸಿ ಪರಿಶೀಲನೆ, ಭೌತಿಕ ಪರಿಶೀಲನೆಯನ್ನು ತ್ವರಿತವಾಗಿ ನಡೆಸಬೇಕು. ಪುನರಾವರ್ತಿತ ಉಲ್ಲಂಘನೆ ಪ್ರಕರಣಗಳಲ್ಲಿ, ಸಂಪರ್ಕ ಕಡಿತ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಟ್ರಾಯ್‌ ಹೇಳಿದೆ.

'ಯುಸಿಸಿ' ಕರೆಗೆ ಮುಕ್ತಾಯ ಶುಲ್ಕ: 'ಕೃತಕ ಧ್ವನಿ ತಂತ್ರಜ್ಞಾನ, ರೋಬೊಕಾಲ್‌ಗಳು ಸೇರಿದಂತೆ ನೇರವಾಗಿ ಮಾನವ ಡಯಲಿಂಗ್‌ ಇಲ್ಲದೆ ಅಪ್ಲಿಕೇಷನ್‌, ಸಾಫ್ಟ್‌ವೇರ್‌ ಅಥವಾ ಸ್ವಯಂಚಾಲಿತ ವೇದಿಕೆಗಳ ಮೂಲಕ ಮಾಡುವ ಕರೆಗಳನ್ನು 'ಎ2ಪಿ' ಕರೆಗಳಾಗಿ ವರ್ಗೀಕರಿಸಲಾಗಿದೆ. ಇಂತಹ ಕರೆಗಳಿಗೆ ಬಳಸುವ ಸಂಖ್ಯೆಯನ್ನು ದೂರವಾಣಿ ಸೇವಾ ಪೂರೈಕೆದಾರರ ಬಳಿ ಮೊದಲೇ ಘೋಷಿಸಬೇಕಾಗುತ್ತದೆ. ಅಂತಹ ಘೋಷಣೆ ಇಲ್ಲದ ಸಂಖ್ಯೆಗಳಿಂದ ಮಾಡಿದ ಕರೆಗಳನ್ನು 'ಯುಸಿಸಿ' ಎಂದು ಪರಿಗಣಿಸಲಾಗುತ್ತದೆ. ಈ ಕರೆಗೆ ಪ್ರತಿ ನಿಮಿಷಕ್ಕೆ 5 ಪೈಸೆಯಂತೆ ಕರೆ ಮುಕ್ತಾಯ ಶುಲ್ಕ ನಿಗದಿಪಡಿಸಲಾಗಿದೆ' ಎಂದು ಟ್ರಾಯ್ ಹೇಳಿದೆ.

ಯುಸಿಸಿ ಕರೆಗಳಾಗಿ 'ಟ್ರಾಯ್‌' ಗೊತ್ತುಪಡಿಸಿದ ಸಂಖ್ಯಾ ಸರಣಿ ಮೂಲಕ ಮಾಡಲಾದ ಎ2ಪಿ ಕರೆಗಳಿಗೆ ಮುಕ್ತಾಯ ಶುಲ್ಕದಿಂದ ವಿನಾಯ್ತಿಯನ್ನೂ ನೀಡಲಾಗಿದೆ.







 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries