ಕಾಸರಗೋಡು: ಚಿನ್ಮಯ ವಿದ್ಯಾಲಯದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯನ್ನು ಭಕ್ತಿಭಾವದಿಂದ ವೈಭವದಿಂದ ಆಚರಿಸಲಾಯಿತು. ವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿತಾರಾಪಿ. ಎಸ್. ವಹಿಸಿದ್ದರು.
ಅಖಿಲ ಕೇರಳ ಚಿನ್ಮಯ ಮಿಷನ್ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತಿ ಆಶೀರ್ವಚನ ನೀಡಿದರು. ಮಕ್ಕಳು ದೇವರು ನೀಡಿದ ಅಮೂಲ್ಯ ಕೊಡುಗೆಗಳು ಎಂದು ಅವರು ಹೇಳಿದರು. ಮಕ್ಕಳ ಪ್ರತಿಭೆಯನು ಪೋಷಿಸುವುದರ ಜೊತೆಗೆ ಅವರಲ್ಲಿ ಪ್ರೀತಿ, ಸೌಹಾರ್ದತೆ ಮತ್ತು ಉತ್ತಮ ಮೌಲ್ಯಗಳನ್ನು ಬೆಳೆಸುವ ಮಹತ್ವವನ್ನು ಅವರು ತಿಳಿಸಿದರು.
ಆಚರಣೆಯ ಅಂಗವಾಗಿ ವಿದ್ಯಾಲಯದ ಮಕ್ಕಳು ಪ್ರದರ್ಶಿಸಿದ ಶ್ರೀಕೃಷ್ಣ ನೃತ್ಯಾವಿಷ್ಕಾರ ಗಮನ ಸೆಳೆಯಿತು. ಮಕ್ಕಳ ರಾಧಾ-ಕೃಷ್ಣ ವೇಷಭೂಷಣ ಪ್ರದರ್ಶನವೂ ಅತ್ಯಂತ ಆಕರ್ಷಕವಾಗಿತ್ತು. ನಂತರ ನಡೆದ ಶೋಭಾಯಾತ್ರೆ ಕಾರ್ಯಕ್ರಮಕ್ಕೆ ಭಕ್ತಿ ಭಾವದ ವಾತಾವರಣವನ್ನು ಮೂಡಿಸಿತು. ಮಕ್ಕಳು ಉತ್ಸಾಹದಿಂದ ಭಾಗವಹಿಸಿದ ಮೊಸರುಕುಡಿಕೆ ಕಾರ್ಯಕ್ರಮವೂ ಗಮನಾರ್ಹವಾಗಿತ್ತು.
ರಾಧಾ-ಕೃಷ್ಣ ವೇಷಭೂಷಣ ಪ್ರದರ್ಶನದಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಣೆಯನ್ನು ಪ್ರಾಂಶುಪಾಲ ಸುಕುಮಾರನ್, ಉಪ ಪ್ರಾಂಶುಪಾಲ ಅಭಿಜಿತ್, ಮುಖ್ಯೋಪಾಧ್ಯಾಯಿನಿಯರಾದ ಪೂರ್ಣಿಮಾ ಎಸ್.ಆರ್. ಮತ್ತು ಸಿಂಧು ಶಶೀಂದ್ರನ್ ನೆರವೇರಿಸಿದರು.
ಮಕ್ಕಳ ಕಲಾತ್ಮಕ ಪ್ರತಿಭೆ ಹಾಗೂ ಭಾರತೀಯ ಸಂಸ್ಕøತಿಯ ಮೇಲಿನ ಗೌರವವನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಲಾದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯುವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ಸಂತೋಷದಾಯಕ ಅನುಭವವಾಯಿತು.

.jpeg)
.jpeg)
