HEALTH TIPS

ದೈಗೋಳಿ: ಉಚಿತ ಪ್ರಕೃತಿ ಚಿಕಿತ್ಸೆ, ಯೋಗ ಹಾಗೂ ನೇತ್ರ ತಪಾಸಣೆ ಶಿಬಿರ

ಮಂಜೇಶ್ವರ: ಯೆನೆಪೆÇೀಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಹಾಗೂ ಆಸ್ಪತ್ರೆ ನರಿಂಗಾನ, ದೇರಳಕಟ್ಟೆ ಹಾಗೂ ಜ್ಞಾನೋದಯ ಸಮಾಜ ದೈಗೋಳಿ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ದೈಗೋಳಿಯ ಜಂಟಿ ಆಶ್ರಯದಲ್ಲಿ ಭಾನುವಾರ ರಾಷ್ಟ್ರೀಯ ಪೌಷ್ಠಿಕ ಮಾಸಾಚರಣೆ 2026ರ ಅಂಗವಾಗಿ ಉಚಿತ ಪ್ರಕೃತಿ ಚಿಕಿತ್ಸೆ, ಯೋಗ ಶಿಬಿರ ಮತ್ತು ಉಚಿತ ನೇತ್ರ ತಪಾಸಣೆ ಶಿಬಿರ ದೈಗೋಳಿ ಶ್ರೀ ಗಣೇಶ ಮಂದಿರದಲ್ಲಿ ಜರಗಿತು. 


ಶಿಬಿರರವನ್ನು ಜ್ಞಾನೋದಯ ಸಮಾಜದ ಅಧ್ಯಕ್ಷ ಹಾಗೂ ದೈಗೋಳಿ ಶ್ರೀಗಣೇಶೋತ್ಸವದ ಗೌರವಾಧ್ಯಕ್ಷ ಪಿ.ಶಿವರಾಮ ಭಟ್ ಮಡ್ವ ದೀಪಪ್ರಜ್ವಲಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮೀಂಜ ಪಂಚಾಯತಿ ಸದಸ್ಯೆ ಶಾಂತ ಕುಮಾರಿ ತಂಬಿಲಕೋಡಿ ಭಾಗವಹಿಸಿದರು. ದೈಗೋಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ತಿಲಕ್ ಪ್ರಸಾದ್ ಅಡೆಕಳಕಟ್ಟೆ, ಗಣೇಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸತ್ಯನಾರಾಯಣ ಭಟ್ ಪಜ್ವ, ಜ್ಞಾನೋದಯ ಸಮಾಜದ ಕೋಶಾಧಿಕಾರಿ ಬಿ. ವಿ. ರಾಜಗೋಪಾಲ್ ದೈಗೋಳಿ, ಯೆನೆಪೆÇೀಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಹಾಗೂ ಆಸ್ಪತ್ರೆಯ ವೈದ್ಯರುಗಳಾದ ಡಾ. ವಿನಯ ಕುಮಾರ.ಟಿ, ಡಾ. ಅಜಿತ್ ಕೆ, ಡಾ.ಸಂಗೀತಾ ಲಕ್ಷ್ಮೀ, ಯೆನೆಪೆÇೀಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ನೇತ್ರ ತಜ್ಞೆ ಡಾ.ಲಿನಿನ್ ವರ್ಗಿಸ್ ಉಪಸ್ಥಿತರಿದ್ದರು. ಆರೋಗ್ಯದ ಬಗ್ಗೆ ಮಾಹಿತಿಯನ್ನು ಡಾ. ವಿನಯ ಕುಮಾರ ಟಿ ನೀಡಿದರು. ಶಿಬಿರದಲ್ಲಿ ಉಚಿತ ರಕ್ತದೊತ್ತಡ ತಪಾಸಣೆ, ರಕ್ತದಲ್ಲಿನ ಸಕ್ಕರೆ ಪ್ರಮಾಣ ತಪಾಸಣೆ, ನೇತ್ರ ತಪಾಸಣೆ ಹಾಗೂ ಉಚಿತ ಅರೋಗ್ಯ ಸೇವೆಗಳಾದ ಸಾಮಾನ್ಯ ವೈದ್ಯಕೀಯ ಸಲಹೆ, ಆಹಾರ ಪೌಷ್ಠಿಕ ಸಲಹೆ, ಮಸಾಜ್ ಚಿಕಿತ್ಸೆ, ಆಕ್ಯುಪ್ರೆಷರ್ ಚಿಕಿತ್ಸೆ, ಯೋಗ ಚಿಕಿತ್ಸೆ ಹಾಗೂ ಮಾರ್ಗದರ್ಶನ ನಡೆಯಿತು. ಸುಮಾರು 85 ಮಂದಿ ಈ ಶಿಬಿರದ ಪ್ರಯೋಜನ ಪಡೆದರು. ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಧಾನ ಕಾರ್ಯದರ್ಶಿ ಮಾಧವ ಶೆಟ್ಟಿಗಾರ್ ದೈಗೋಳಿ ಸ್ವಾಗತಿಸಿ, ಜ್ಞಾನೋದಯ ಸಮಾಜದ ಪ್ರಧಾನ ಕಾರ್ಯದರ್ಶಿ ಸುಧೀರ್ ರಂಜನ್ ದೈಗೋಳಿ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries