HEALTH TIPS

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಡೈರೆಕ್ಟರಿ ಪ್ರಕಟಣೆಗೆ ಸಿದ್ಧತೆ

ಕಾಸರಗೋಡು: ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಾಂಸ್ಕøತಿಕ ಮತ್ತು  ಸಾಹಿತ್ಯಕ ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.),ಕನ್ನಡ ಗ್ರಾಮ, ಕಾಸರಗೋಡು ಇದರ 36ನೇ ಸಂಸ್ಥಾಪನಾ ವರ್ಷಾಚರಣೆ ಅಂಗವಾಗಿ ಕಾಸರಗೋಡು ಕನ್ನಡ ಗ್ರಾಮದಲ್ಲಿ 2026 ನವಂಬರ್ 28 ಮತ್ತು 29 ರಂದು ನಡೆಯುವ ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನ ,ಕೇರಳ- ಕರ್ನಾಟಕ ಉತ್ಸವ, ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವದಲ್ಲಿ ಕನ್ನಡ, ತುಳು ಮತ್ತು ವಿವಿಧ ಭಾಷಾ ಸಮುದಾಯ ಸಂಘಟನೆಗಳ ವಿಳಾಸದ ಡೈರೆಕ್ಟರಿಯ ಎರಡನೇ ಪರಿಷ್ಕೃತ ಆವೃತ್ತಿಯನ್ನು ಪ್ರಕಟಿಸಲು ನಿರ್ಧರಿಸಲಾಗಿದೆ.

ಕೇರಳ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಕಾಸರಗೋಡು ಜಿಲ್ಲೆಯಲ್ಲಿರುವ ಸುಮಾರು 500 ರಷ್ಟು ಕನ್ನಡ, ತುಳು ಮತ್ತು ವಿವಿಧ ಭಾಷಾ  ಸಮುದಾಯಗಳ ಸಂಘ ಸಂಸ್ಥೆಗಳು ಮತ್ತು ಇತರ ಉಪಭಾಷೆಯ ಸಾಹಿತ್ಯಿಕ ಸಾಂಸ್ಕೃತಿಕ, ಸಾಮಾಜಿಕ, ಕನ್ನಡ, ತುಳು ಸಂಘಟನೆಗಳು ಹಾಗೂ ಸಾರ್ವಜನಿಕ ಸ್ವಯಂಸೇವಾ ಸಂಘ ಸಂಸ್ಥೆಗಳು, ಸುಮಾರು 500 ರಷ್ಟು ಭಜನಾ ಸಂಘ, ಭಜನಾ ಮಂಡಳಿ, ಭಜನಾ ಮಂದಿರಗಳು, ಕನ್ನಡ ಶಾಲಾ ಕಾಲೇಜುಗಳು, ಖಾಸಗಿ ಕನ್ನಡ ಶಾಲೆ ಕಾಲೇಜುಗಳ ಹೆಸರು, ಪೂರ್ಣ ವಿಳಾಸ, ಮೊಬೈಲ್ ವಾಟ್ಸ್ ಪ್ ಸಂಖ್ಯೆ,ಇ-ಮೇಲ್, ಸ್ಥಾಪನೆಯಾದ ವರ್ಷ,  ಸಂಕ್ಷಿಪ್ತ ಪರಿಚಯ ಪತ್ರ ಮತ್ತು ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ ಹಾಗೂ ಪದಾಧಿಕಾರಿಗಳ ಹೆಸರು, ಮನೆ ವಿಳಾಸಗಳನ್ನು ಲೆಟರ್ ಹೆಡ್  ಯಾ ಬಿಳಿ ಕಾಗದದಲ್ಲಿ  ಪ್ರತ್ಯೇಕವಾಗಿ ಬರೆದು 2026 ಅಕ್ಟೋಬರ್ 31ರ ಮುಂಚಿತವಾಗಿ ಶಿವರಾಮ ಕಾಸರಗೋಡು, ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ. ),ಕನ್ನಡ ಗ್ರಾಮ, ಮೀಪುಗುರಿ -ಪಾರೆಕಟ್ಟೆ ರಸ್ತೆ, ಕಾಸರಗೋಡು -671121 ಎಂಬ ವಿಳಾಸಕ್ಕೆ ಅಂಚೆ ಮೂಲಕ ಅಥಾ (ಮೊಬೈಲ್ :9448572016, 9901951965) ವಿಳಾಸಕ್ಕೆ ವಾಟ್ಸ್‍ಪ್ ಮೂಲಕ ಕಳುಹಿಸಬಹುದು. ಇಮೈಲ್ Shivaramakasaragod @gmail.com






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries