HEALTH TIPS

ಬ್ರಿಕ್ಸ್‌ಗೆ ಎರಡು ದಶಕ; ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿದ ಭಾರತೀಯ ಅಂಚೆ

ನವದೆಹಲಿ: ಬ್ರಿಕ್ಸ್‌ ರಚನೆಯಾಗಿ ಎರಡು ದಶಕ ಪೂರೈಸಿದ ಹಿನ್ನೆಲೆಯಲ್ಲಿ ಭಾರತೀಯ ಅಂಚೆ ಇಲಾಖೆಯು ಎರಡು ಸ್ಮರಣಾರ್ಥ ಅಂಚೆ ಚೀಟಿಗಳನ್ನು ಇಂದು(ಸೆ.12) ಬಿಡುಗಡೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


2006ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದ ಸಂದರ್ಭದಲ್ಲಿ ನಡೆದ ಬ್ರಿಕ್ ವಿದೇಶಾಂಗ ಸಚಿವರ ಮೊದಲ ಸಭೆಯಲ್ಲಿ ಈ ಒಕ್ಕೂಟವನ್ನು ಔಪಚಾರಿಕಗೊಳಿಸಲಾಯಿತು.

ನಂತರ, ಈ ಒಕ್ಕೂಟಕ್ಕೆ ದಕ್ಷಿಣ ಆಫ್ರಿಕಾ ಸೇರ್ಪಡೆಗೊಂಡ ನಂತರ ಇದನ್ನು ಬ್ರಿಕ್ಸ್‌ ಎಂದು ಮರುನಾಮಕರಣ ಮಾಡಲಾಯಿತು.

ನವದೆಹಲಿಯ ಭಾರತ ಮಂಟಪದಲ್ಲಿ ನಡೆಯುತ್ತಿರುವ 18ನೇ ಬ್ರಿಕ್ಸ್‌ ಸಮ್ಮೇಳನದ ವೇಳೆ ಅಂಚೆ ಚೀಟಿಗಳನ್ನು ಬಿಡುಗಡೆಗೊಳಿಸಲಾಗಿದೆ. ಅದರ ಒಳಗೆ 'ಬ್ರಿಕ್ಸ್: ಎರಡು ದಶಕಗಳ ಸಹಕಾರ, 2006-2026' ಎಂದು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ. ಮೊದಲ ಅಂಚೆ ಚೀಟಿಯಲ್ಲಿ ಬ್ರಿಕ್ಸ್‌ನ ಉಗಮ ಹಾಗೂ ಎರಡನೇ ಚೀಟಿಯಲ್ಲಿ ಲೋಗೊವನ್ನು ಒಳಗೊಂಡಿದೆ.

ಭಾರತ, ಬ್ರಿಜಿಲ್, ಚೀನಾ, ಈಜಿಪ್ಟ್‌, ಇಥೋಪಿಯಾ, ಇಂಡೊನೇಷ್ಯಾ, ಇರಾನ್, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ ಮತ್ತು ಯುಎಇ ದೇಶಗಳು ಬ್ರಿಕ್ಸ್‌ ಒಕ್ಕೂಟದಲ್ಲಿವೆ.

ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಬ್ರಿಕ್ಸ್‌ ಸಮ್ಮೇಳನದಲ್ಲಿ 11 ದೇಶಗಳ ಪ್ರಮುಖ ನಾಯಕರು ಭಾಗವಹಿಸಿದ್ದಾರೆ.


#WATCH | Delhi: At the BRICS Summit 2026, PM Narendra Modi launches two postage stamps, commemorating 20 years of BRICS. (Video: DD News)




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries