ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಅರಿಕ್ಕಾಡಿ ಕುಂಡಾವು ಎಂಬಲ್ಲಿ ಕಾರು ಮತ್ತು ಬೈಕ್ ಸವಾರರ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿ ಪೆÇಲೀಸರು ಎರಡು ಕೇಸು ದಾಖಲಿಸಿಕೊಂಡಿದ್ದಾರೆ.
ಬೈಕ್ ಸವಾರ ಅರಿಕ್ಕಾಡಿ ಕೋಟೆ ಹಿತ್ತಿಲು ನಿವಾಸಿ ಪ್ರದೀಪ್ ಕುಮಾರ್ (42) ನೀಡಿದ ದೂರಿನಂತೆ ಕಾರು ಚಾಲಕ ಸಹಿತ ಇಬ್ಬರ ವಿರುದ್ಧ ಕೇಸು ದಾಖಲಾಗಿದೆ. ಸೆ.21ರಂದು ಸಂಜೆ ಅರಿಕ್ಕಾಡಿ ಕುಂಡಾವು ಎಂಬಲ್ಲಿ ಸ್ನೇಹಿತನ ಬೈಕ್‍ನಲ್ಲಿ ಸಂಚರಿಸುತ್ತಿದ್ದ ವೇಳೆ ಓವರ್‍ಟೇಕ್ ಮಾಡಿ ಕಾರೊಂದು ಅಪಾಯಕಾರಿಯಾಗಿ ಬರುತ್ತಿರುವುದನ್ನು ಕಂಡು ಅದನ್ನು ನಿಲ್ಲಿಸುವಂತೆ ತಿಳಿಸಿದಾಗ ಕಾರಿನಲ್ಲಿದ್ದ ಇಬ್ಬರು ತನಗೆ ಹಾಗೂ ಸ್ನೇಹಿತನಿಗೆ ಹಲ್ಲೆಗೆದಿರುವುದಾಗಿ ಪ್ರದೀಪ್ ಕುಮಾರ್ ಪೆÇಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇದರಂತೆ ಕಾರಿನಲ್ಲಿದ್ದ ಇಬ್ಬರ ವಿರುದ್ಧ ಕೇಸು ದಾಖಲಿಸಲಾಗಿದೆ.
ಇದೇ ರೀತಿ ಕಾರಿನಲ್ಲಿದ್ದ ತಾಯಕೊಡ್ಯಮೆ ನಿವಾಸಿ ಮೂಸಾ ಬಿ.ಪಿ (38) ನೀಡಿದ ದೂರಿನನ್ವಯ ಪ್ರದೀಪ್ ಕುಮಾರ್ ಸೇರಿದಂತೆ ಇಬ್ಬರ ವಿರುದ್ಧ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರದೀಪ್ ಕುಮಾರ್ ಮತ್ತು ಆತನ ಸ್ನೇಹಿತ ಬೈಕ್‍ನಲ್ಲಿ ಜೋರಾಗಿ ಮಾತನಡುತ್ತಾ ಸಂಚರಿಸುತ್ತಿರುವುದನ್ನು ಕಂಡು ತಾನು ಕಾರು ನಿಲ್ಲಿಸಿ ಹೊರಕ್ಕೆಳಿದ ವೇಳೆ ಬೈಕ್‍ನಲ್ಲಿದ್ದ ಇಬ್ಬರು ತನಗೆ ಹಾಗೂ ತನ್ನ ಸಹೋದರಿಯ ಪುತ್ರ ಯಾಸಿರ್ (30)ಗೆ ಹಲ್ಲೆ ನಡೆಸಿದ್ದು, ಇದನ್ನು ತಡೆಯಲು ಬಂದ ತನ್ನ ಪತ್ನಿಯ ಮೇಲೂ ಹಲ್ಲೆ ನಡೆಸಿರುವುದಾಗಿ ಪೆÇಲೀಸರಿಗೆ ನೀಡಿದ ದೂರಿನಲ್ಲಿ ಮೂಸಾ ಆರೋಪಿಸಿದ್ದಾರೆ.


