ಕಾಸರಗೋಡು: ತ್ರಿಕ್ಕರಿಪುರ ರೈಲ್ವೆ ನಿಲ್ದಾಣ ವಠಾರದಿಂದ ಶಿಕ್ಷಕರೊಬ್ಬರ ಬೈಕ್ ಕಳವುಗೈದ ಪ್ರಕರಣಕಕೆ ಸಂಬಂಧಿಸಿ, ಎಂಡಿಎಂಎ ಪ್ರಕರಣದ ಆರೋಪಿ ಒಳಗೊಂಡಂತೆ ಮೂವರನ್ನು ಚಂದೇರ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಚಂದೇರ ಪೆÇಲೀಸ್ ಠಾಣೆ ವ್ಯಾಪ್ತಿಯ ಶಬಾಸ್ (22), ಪಯ್ಯನ್ನೂರು ಪೆÇಲೀಸ್ ಠಾಣೆ ವ್ಯಾಪ್ತಿಯ ಮೊಹಮ್ಮದ್ ಸಾಬಿತ್ (21) ಹಾಗೂ ಫವಾಸ್ ಎ.ಟಿ. (21) ಬಂಧಿತರು.
ಇಳಂಬಜ್ಜಿ ತಳಿಚಾಲಂ ನಿವಾಸಿ ಶಿಕ್ಷಕ ಪಿ.ವಿ. ಪ್ರಶೋಭ್ ಅವರ ಬೈಕ್ 2026 ಸೆಪ್ಟೆಂಬರ್ 21ರಂದು ತ್ರಿಕ್ಕರಿಪುರ ರೈಲ್ವೆ ನಿಲ್ದಾಣ ವಠಾರದಿಂದ ಕಳವಾಗಿದ್ದು, ಈ ಬಗ್ಗೆ ಪ್ರಶೋಭ್ ಚಂದೇಋ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಸಿಸಿ ಕ್ಯಾಮರಾ ದೃಶ್ಯಾವಳಿ ತಪಾಸಣೆ ನಡೆಸಿದ ಪೊಲಿಸರು ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ.
ಇವರನ್ನು ವಿಚಾರಣೆಗೊಳಪಡಿಸಿದಾಘ ಕಳವುಗೈದ ಬೈಕ್‍ಗಳನ್ನು ಬಿಡಿಭಾಗಬೇರ್ಪಡಿಸಿ ಗುಜರಿ ಅಂಗಡಿಗೆ ಮಾರಾಟ ಮಾಡಿರುವುದಾಗಿ ಮಾಹಿತಿ ಲಭಿಸಿದೆ. ಆರೋಪಿಗಳ ಪೈಕಿ ಮಹಮ್ಮದ್ ಸಾಬಿತ್ ಬೆಂಗಳೂರಿನಲ್ಲಿ ಎಂಡಿಎಂಎ ಸಾಗಾಟಕ್ಕೆ ಸಂಬಂಧಿಸಿ ಕೇಸು ದಾಖಲಾಗಿರುವುದಾಗಿ ಮಾಹಿತಿ ಲಭಿಸಿದೆ.


