ಕಾಸರಗೋಡು: ಮನೆಯ ಮಲಗುವ ಕೊಠಡಿಯಲ್ಲಿ ಅಕ್ರಮವಾಗಿ ದಾಸ್ತಾನಿರಿಸಲಾಗಿದ್ದ 1.718 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡಿರುವ ಅಬಕಾರಿ ದಳ ಸಿಬ್ಬಂದಿ ಮಹಿಳೆಯನ್ನು ಬಂಧಿಸಿದ್ದಾರೆ. ಪನತ್ತಡಿ ಪುತ್ತೂರು ಅಡುಕ್ಕತ್ತ್ ನಿವಾಸಿ ಪಿ.ಸಿ. ಮೀನಾಕ್ಷಿ (47) ಬಂಧಿತೆ.
ಕಾಸರಗೋಡು ಅಬಕಾರಿ ಇಂಟೆಲಿಜೆನ್ಸ್ ಅಂಡ್ ಇನ್ವೆಸ್ಟಿಗೇಷನ್ ಬ್ಯೂರೋಗೆ ಲಭಿಸಿದ ಖಚಿತ ಮಾಹಿತಿಯನ್ವಯ ಬುಧವಾರ ನಸುಕಿಗೆ ಅಬಕಾರಿ ತಂಡವು ಮೀನಾಕ್ಷಿ ಅವರ ಮನೆಯಲ್ಲಿ ಪರಿಶೀಲನೆ ನಡೆಸಿ, ಮಲಗುವ ಕೊಠಡಿಯಲ್ಲಿ ಗಾಂಜಾ ಪತ್ತೆಹಚ್ಚಲಾಗಿತ್ತು.

