ಕಾಸರಗೋಡು: ವಿದ್ಯಾನಗರ ಚೆಟ್ಟುಂಗುಯಿಯ ರಾಯಲ್ ಕನ್ವೆನ್ಶನ್ ಸಭಾಂಗಣದಲ್ಲಿ ವಿಶೇಷವಾಗಿ ಸಿದ್ಧಪಡಿಸಲಾಗಿದ್ದ ಬಿ.ಎಂ. ಕೃಷ್ಣನ್ ನಂೀಶನ್ ನಗರದಲ್ಲಿ ಕಳೆದ ಎರಡು ದಿವಸಗಳಿಂದ ನಡೆದ ಶ್ರೀಪುಷ್ಪಕ ಬ್ರಾಹ್ಮಣ ಸೇವಾ ಸಂಘದ 58ನೇ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕೆ.ಕೆ. ಸೋಯಾ ಅವರು ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದರು.
ಕಾಸರಗೋಡು ಶಾಸಕ ಕಲ್ಲಾತ್ರಾ ಮಹಿನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭ ವಿವಿಧ ಸ್ಮರಣಿಕೆ ಬಿಡುಗಡೆ ಮಾಡಲಾಯಿತು. ಮಹಿಳಾ ಸಮಾವೇಶವನ್ನು ಮಧೂರು ಪಂಚಾಯತ್ ಅಧ್ಯಕ್ಷೆ ಸುಜ್ಞಾನಿ ಎಸ್. ಶಾನ್‍ಭಾಗ್, ಅಖಿಲ ಭಾರತ ಬ್ರಾಹ್ಮಣ ಒಕ್ಕೂಟದ ಅಧ್ಯಕ್ಷ ಡಾ. ಪ್ರದೀಪ್ ಜ್ಯೋತಿ ಸಾಂಸ್ಕøತಿಕ ಸಮ್ಮೇಳನ, ಯುವ ಸಮಾವೇಶವನ್ನು ನಿವೃತ್ತ ಸರ್ಕಾರಿ ಕಾರ್ಯದರ್ಶಿ ಕೆ. ಗೋಪಾಲಕೃಷ್ಣ ಭಟ್ ಉದ್ಘಾಟಿಸಿದರು. ಈ ಸಂದರ್ಭ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಎಲ್.ಪಿ. ವಿಶ್ವನಾಥನ್ ಅಧ್ಯಕ್ಷ, ಕೃಷ್ಣನ್ ನಂಬೀಸನ್ ಪ್ರಧಾನ ಕಾರ್ಯದರ್ಶಿ ಮತ್ತು ಪಿ.ಆರ್. ಹರಿ ಕೋಶಾಧಿಕಾರಿಯಾಗಿ ಆಯ್ಕೆಯಾದರು. ಸಂಘಟನಾ ಸಮಿತಿಯ ಅಧ್ಯಕ್ಷ ವಿ.ಎಂ. ಕೃಷ್ಣಪ್ರಸಾದ್ ಸಮ್ಮೇಳನದ ಕುರಿತು ಅವಲೋಕನ ನಡೆಸಿದರು. ಮುಖ್ಯ ಸಂಯೋಜಕ ಕೆ.ಎಂ. ಸನೋಜ್ ಮತ್ತು ಪ್ರಧಾನ ಸಂಚಾಲಕ ರಾಜೇಶ್ ಇ. ಉಪಸ್ಥಿತರಿದ್ದರು. ಸುಮಾ ದಿನೇಶ್ ವಂದನಾರ್ಪಣೆ ಸಲ್ಲಿಸಿದರು.

