HEALTH TIPS

ಯುಪಿಐ | ಗ್ರಾಹಕರಿಗಿಲ್ಲ ಶುಲ್ಕದ ಹೊರೆ: ಹಣಕಾಸು ಸಚಿವಾಲಯ

ನವದೆಹಲಿ: ಯುಪಿಐ (ಏಕೀಕೃತ ಪಾವತಿ ವ್ಯವಸ್ಥೆ) ಸೇವೆಯು ಗ್ರಾಹಕರಿಗೆ ಉಚಿತವಾಗಿಯೇ ಉಳಿಯಲಿದೆ. ಸ್ನೇಹಿತರಿಗೆ ಹಣ ಕಳುಹಿಸುವುದು, ಅಂಗಡಿಗಳಿಗೆ ಪಾವತಿಸುವುದು ಅಥವಾ ಕ್ಯೂಆರ್‌ ಕೋಡ್‌ ಬಳಕೆ ಮೂಲಕ ವಹಿವಾಟು ನಡೆಸುವುದು ಇವೆಲ್ಲವೂ ಉಚಿತವಾಗಿಯೇ ನಡೆಯಲಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.  


ಯುಪಿಐ ಮೂಲಕ ₹2,000ಕ್ಕಿಂತ ಹೆಚ್ಚಿನ ವ್ಯವಹಾರ ನಡೆಸುವ ಪ್ರತಿ ವಹಿವಾಟಿಗೆ ಶೇ 0.4 ರಷ್ಟು ಎಂಡಿಆರ್ (ಮರ್ಚೆಂಟ್‌ ಡಿಸ್ಕೌಂಟ್‌ ರೇಟ್‌) ಶುಲ್ಕ ವಿಧಿಸುವುದಾಗಿ ಕೇಂದ್ರ ಸರ್ಕಾರ ಮಂಗಳವಾರ ಘೋಷಿಸಿದ್ದು, ಆದೇಶವು ಅಕ್ಟೋಬರ್‌ 15ರಿಂದ ಜಾರಿಯಾಗಲಿದೆ.

ಹೀಗಾಗಿ, ಗ್ರಾಹಕರಿಗೆ ಇದರಿಂದ ಹೊರೆಯಾಗಲಿದೆಯೇ ಎಂಬ ಗೊಂದಲಗಳು ಮೂಡಿವೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಇದರ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ವಿಚಾರವಾಗಿ ಪೋಸ್ಟ್‌ ಹಂಚಿಕೊಂಡಿರುವ ಸಚಿವಾಲಯ, ಸ್ಪಷ್ಟನೆ ನೀಡಿದೆ. ಗ್ರಾಹಕರಿಗೆ ಉಚಿತ ಸೇವೆ ಮುಂದುವರಿಯಲಿದೆ ಎಂದು ಹೇಳಿದೆ.

ಪರ್ಸನ್‌ ಟು ಪರ್ಸನ್‌ ಅಥವಾ ವ್ಯಕ್ತಿಯಿಂದ ವ್ಯಕ್ತಿಯ ನಡುವೆ (ಪಿ2ಪಿ) ಯುಪಿಐ ಮೂಲಕ ನಡೆಯುವ ಹಣದ ವರ್ಗಾವಣೆ ಉಚಿತವಾಗಿಯೇ ಇರಲಿದೆ. ಹಣ ವರ್ಗಾವಣೆಗೆ ಮಿತಿಯೂ ಇರುವುದಿಲ್ಲ. ಸಣ್ಣ ವ್ಯಾಪಾರಿಗಳಿಗೆ ರಕ್ಷಣೆ ಸಿಗಲಿದೆ. ಯುಪಿಐ ಕ್ಯೂಆರ್‌ ಕೋಡ್‌ ಮೂಲಕ ತಿಂಗಳಿಗೆ ₹ 1 ಲಕ್ಷದವರೆಗೆ ವ್ಯವಹಾರ ನಡೆಸಲು ಯಾವುದೇ ಶುಲ್ಕ ಇರುವುದಿಲ್ಲ. ಶೇ 95ಕ್ಕಿಂತ ಹೆಚ್ಚು ವ್ಯಾಪಾರಿ ಪಾವತಿಗಳು ₹2,000 ಕ್ಕಿಂತ ಕಡಿಮೆ ವಹಿವಾಟುಗಳಾಗಿದ್ದು, ಉಚಿತವಾಗಿಯೇ ಮುಂದುವರಿಯಲಿವೆ ಎಂದು ಹೇಳಿದೆ.

₹2,000ಕ್ಕಿಂತ ಹೆಚ್ಚಿನ ವಹಿವಾಟು ನಡೆಸುವ ವ್ಯಾಪಾರಿಗಳಷ್ಟೇ ಶೇ 0.4 ರಷ್ಟು ಶುಲ್ಕ ಪಾವತಿಸಬೇಕು. ಇದು ಕ್ರೆಡಿಟ್ ಕಾರ್ಡ್ ಅಥವಾ ಇತರ ಕೆಲವು ಸೇವಾ ಶುಲ್ಕಕ್ಕಿಂತಲೂ ಕಡಿಮೆ ಇದೆ ಎಂದು ಪ್ರತಿಪಾದಿಸಿದೆ.

ಹಾಗೆಯೇ, ರೈಲ್ವೆ, ಇಂಧನ, ಟೆಲಿಕಾಂ, ಬಿಲ್‌ ಪಾವತಿ, ವಿಮೆ ಸೇರಿದಂತೆ ಅತ್ಯಗತ್ಯ ಸೇವೆಗಳಲ್ಲಿ ₹2,000ಕ್ಕಿಂತ ಅಧಿಕ ವಹಿವಾಟಿಗೆ ₹ 5 ಶುಲ್ಕವನ್ನು ಸ್ಥಿರಗೊಳಿಸಲಾಗಿದೆ ಎಂದು ತಿಳಿಸಿದೆ.

ಹಾಗೆಯೇ, ವ್ಯಾಪಾರಿಗಳು ಮರ್ಚಂಟ್‌ ಡಿಸ್ಕೌಂಟ್‌ ರೇಟ್ (ಎಂಡಿಆರ್‌) ಅನ್ನು ಗ್ರಾಹಕರ ಮೇಲೆ ಹಾಕಲು ಸಾಧ್ಯವಿಲ್ಲ. ಹಾಗೆಯೇ, ಯುಪಿಐ ಆಯಪ್‌ಗಳು ಪ್ಲಾಟ್‌ಫಾರ್ಮ್‌ ಶುಲ್ಕ ವಿಧಿಸುವುದಿಲ್ಲ ಎಂದು ಉಲ್ಲೇಖಿಸಿದೆ.

ವಿದೇಶಿ ಪ್ರಭಾವದಿಂದಾಗಿ ಕೇಂದ್ರ ಸರ್ಕಾರವು ಯುಪಿಐ ವಹಿವಾಟಿಗೆ ಶುಲ್ಕ ವಿಧಿಸುತ್ತಿದೆ ಎಂಬ ಆರೋಪ ನಿರಾಧಾರವಾದದ್ದು ಎಂದಿರುವ ಸಚಿವಾಲಯ, ಸ್ವಾವಲಂಬಿ, ಎಲ್ಲರನ್ನೂ ಒಳಗೊಳ್ಳುವ ಮತ್ತು ಕೈಗೆಟುಕುವ ರೀತಿಯಲ್ಲಿ ಡಿಜಿಟಲ್‌ ಪಾವತಿ ಪರಿಸರ ವ್ಯವಸ್ಥೆ ನಿರ್ಮಿಸುವ ಗುರಿಯೊಂದಿಗೆ ಯುಪಿಐ ನೀತಿ ನಿರ್ಧಾರಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳಲಾಗುತ್ತದೆ ಎಂದು ಒತ್ತಿ ಹೇಳಿದೆ.

2016ರಲ್ಲಿ ಪ್ರಾರಂಭವಾದ ಯುಪಿಐ, ವಿಶ್ವದ ಅತಿದೊಡ್ಡ ಪಾವತಿ ವ್ಯವಸ್ಥೆಯಾಗಿ ಬೆಳೆದಿದೆ. 2026ರ ಆಗಸ್ಟ್‌ನಲ್ಲಿ 2,450 ಕೋಟಿ ವಹಿವಾಟು ನಡೆದಿದೆ. ಈ ವ್ಯವಸ್ಥೆಯನ್ನು ಸುಸ್ಥಿರ, ಸುರಕ್ಷಿತ ಮತ್ತು ವಿನೂತನವಾಗಿ ಉಳಿಸಿಕೊಳ್ಳಲು, ಭಾರಿ ಮೊತ್ತದ ವಹಿವಾಟಿಗೆ ಸಣ್ಣ ಪ್ರಮಾಣದ ಶುಲ್ಕ ವಿಧಿಸುವುದು ನೆರವಾಗಲಿದೆ ಎಂದು ವಿವರಿಸಲಾಗಿದೆ.


🔰 UPI Remains Free for Consumers UPI continues to be free for customers. Sending money to friends, paying at shops, or scanning a QR code — all remain without charges. Key Facts: ✅ No charges on P2P: Person-to-Person transfers are always free, regardless of amount. ✅ Small Show more






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries