HEALTH TIPS

ವಾಯುಮಾಲಿನ್ಯದಿಂದ ಆತ್ಮಹತ್ಯೆ ಚಿಂತನೆ ಹೆಚ್ಚಳ: ಅಧ್ಯಯನದ ವರದಿ

ನವದೆಹಲಿ: ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಆತ್ಮಹತ್ಯೆ ಅಥವಾ ಆತ್ಮಹತ್ಯಾ ಆಲೋಚನೆಗಳಿಂದ ಸಾವಿನ ಅಪಾಯ ಹೆಚ್ಚಾಗುತ್ತಿದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಪಿಎಂ2.5, ಪಿಎಂ10 ಮತ್ತು ನೈಟ್ರೋಜನ್ ಡೈಆಕ್ಸೈಡ್‌ಯುಕ್ತ ವಾಯುಮಾಲಿನ್ಯ ಹೆಚ್ಚಿನ ಅಪಾಯ ಉಂಟುಮಾಡುತ್ತವೆ ಎಂದು ಅದು ಹೇಳಿದೆ. 


ಜರ್ನಲ್ ಆಫ್ ಎಪಿಡೆಮಿಯಾಲಜಿ ಮತ್ತು ಕಮ್ಯುನಿಟಿ ಹೆಲ್ತ್‌ನಲ್ಲಿ ಸಂಶೋಧನೆಯ ವರದಿ ಪ್ರಕಟವಾಗಿದೆ.

ಆತ್ಮಹತ್ಯೆ ತಡೆಗಟ್ಟುವ ಕಾರ್ಯತಂತ್ರಗಳಲ್ಲಿ ಮಾಲಿನ್ಯಕ್ಕೆ ಒಡ್ಡಿಕೊಳ್ಳುವಿಕೆ ತಡೆಯುವುದನ್ನೂ ಪ್ರಮುಖ ಅಂಶವಾಗಿ ಪರಿಗಣಿಸುವ ಅಗತ್ಯವಿದೆ ಎಂದು ಸಂಶೋಧನೆ ಒತ್ತಿ ಹೇಳಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಬ್ರಿಟನ್‌ನ ಕ್ವೀನ್ಸ್ ವಿಶ್ವವಿದ್ಯಾಲಯದ ತಂಡವು, ಆತ್ಮಹತ್ಯೆ ಮತ್ತು ಆತ್ಮಹತ್ಯಾ ಆಲೋಚನೆಗಳ ಮೇಲೆ ವಾಯು ಮಾಲಿನ್ಯದ ಪರಿಣಾಮ ಕುರಿತಾದ 29 ಅಧ್ಯಯನ ಫಲಿತಾಂಶಗಳನ್ನು ವಿಶ್ಲೇಷಿಸಿದೆ.

ವೈಯಕ್ತಿಕ, ಜೈವಿಕ ಮತ್ತು ಸಂದರ್ಭೋಚಿತ ಅಂಶಗಳು ಪರಿಣಾಮ ಬೀರುತ್ತಿದ್ದು, ಆತ್ಮಹತ್ಯೆ ತಡೆಗಟ್ಟುವಿಕೆಯು ಒಂದು ಸಾರ್ವಜನಿಕ ಆರೋಗ್ಯದ ಪ್ರಮುಖ ವಿಷಯವಾಗಿದೆ ಎಂಬುದನ್ನು ಅಧ್ಯಯನ ಸೂಚಿಸುತ್ತದೆ ಎಂದು ಅವರು ಹೇಳಿದ್ದಾರೆ.

ಖಿನ್ನತೆಯಂತಹ ಮಾನಸಿಕ ಆರೋಗ್ಯದ ಮೇಲೆ ಪರಿಸರ ಸಂಬಂಧಿತ ಅಂಶಗಳ ಪ್ರಭಾವದ ಕುರಿತು ವ್ಯಾಪಕ ಅಧ್ಯಯನ ನಡೆದಿವೆ. ಆದರೂ, ಆತ್ಮಹತ್ಯೆ ಅಪಾಯದ ಮೇಲೆ ಪರಿಸರದ ಅಂಶಗಳು ಬೀರುವ ಪರಿಣಾಮದ ಬಗ್ಗೆ ಇನ್ನೂ ಹೆಚ್ಚಿನ ತಿಳುವಳಿಕೆ ಅಗತ್ಯವಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries