ನುವಾಕೊಟ್: ನೇಪಾಳದ ಚಿಲಿಮೆ ಜಲವಿದ್ಯುತ್ ಕೇಂದ್ರಲ್ಲಿ ಭಾರತ, ನೇಪಾಳದ ವಿಶೇಷ ಸುರಂಗ ರಕ್ಷಣಾ ತಂಡಗಳು ನಡೆಸುತ್ತಿರುವ ಕಾರ್ಯಾಚರಣೆಯು ಅಂತಿಮ ಹಂತ ತಲುಪಿದ್ದು, ಭೂಗತ ವಿದ್ಯುತ್‌ಶಕ್ತಿ ಕೇಂದ್ರ ತಲುಪುವ ಮಾರ್ಗ ಸುಗಮಗೊಂಡಿದೆ. ಇಲ್ಲಿಯೇ ಆರು ಮಂದಿ ಸಿಲುಕಿದ್ದಾರೆಂದು ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ನಿರಂತರವಾಗಿ ಹರಿದುಬರುತ್ತಿದ್ದ ನೀರು ಹಾಗೂ ದೊಡ್ಡದಾದ ಬಂಡೆಗಲ್ಲುಗಳಿಂದ ಕಾರ್ಯಾಚರಣೆಯ ವೇಳೆ ದೊಡ್ಡ ಮಟ್ಟದ ಸವಾಲುಗಳು ಎದುರಾದವು. ವೀಲ್ ಲೋಡರ್‌ಗಳನ್ನು ಬಳಸಿಕೊಂಡು, ಅಲ್ಲಿದ್ದ ತ್ಯಾಜ್ಯವನ್ನು ಹೊರಹಾಕಲಾಗಿದೆ. ಎರಡೂ ತಂಡದವರು ಸತತ ಕಾರ್ಯಾಚರಣೆ ನಡೆಸಿ ನಿಗದಿತ ಸ್ಥಳ ತಲುಪಲು ಯಶಸ್ವಿಯಾಗಿದ್ದಾರೆ' ಎಂದು ನೇಪಾಳದ ಭಾರತದ ರಾಯಭಾರಿ ನವೀನ್ ಶ್ರೀ ವಾಸ್ತವ ತಿಳಿಸಿದ್ದಾರೆ.

