ಕಾಸರಗೋಡು: ಅಸೌಖ್ಯ ಬಾಧಿಸಿ ಆಸ್ಪತ್ರೆಗೆ ದಾಖಲಾಗಿದ್ದ ಪತಿಯ ಆರೈಕೆಯಲ್ಲಿ ನಿರತರಾಗಿದ್ದ ಮಹಿಳೆಯ 52,000 ರೂ. ಹಾಗೂ ಹಲವು ದಾಖಲೆ ಒಳಗೊಂಡ ಪರ್ಸ್ ಕಳುವಾಗಿರುವ ಬಗ್ಗೆ ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಮಾಯಿಪ್ಪಾಡಿ ಕೈವಲ್ಯ ಹೌಸ್ನ ಟಿ.ಎ. ಅಬ್ದುಲ್ ಖಾದರ್ ಅವರ ದೂರಿನನ್ವಯ ಈ ಕೇಸು. ಅಸೌಖ್ಯಪೀಡಿತರಾಗಿದ್ದ ತಂದೆಯ ಆರೈಕೆಗಾಗಿ ತಾಯಿ ಆಸ್ಪತ್ರೆಗೆ ತೆರಳಿದ್ದರು. ಇವರ ನಗದು, ದಾಖಲೆ ಹೊಂದಿದ ಬ್ಯಾಗನ್ನು ಆಸ್ಪತ್ರೆ ಕೊಠಡಿಯ ಮೇಜಿನ ಡ್ರಾಯರಲ್ಲಿರಿಸಿದ್ದು, ಅಲ್ಪ ಹೊತ್ತಿನ ಬಳಿಕ ಬ್ಯಾಗ್ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.


