HEALTH TIPS

ಗರ್ಬಾ ಕಾರ್ಯಕ್ರಮಗಳಿಗೆ ಮುಸ್ಲಿಂ ಯುವಕರು ತಮ್ಮ ಸಹೋದರಿಯರ ಕರೆತರಲಿ: ಬಿಜೆಪಿ ಶಾಸಕ

ಭೋಪಾಲ್‌: 'ಗರ್ಬಾ' ನೃತ್ಯ ಕಾರ್ಯಕ್ರಮಗಳಿಗೆ ಮುಸ್ಲಿಂ ಯುವಕರು ಒಬ್ಬರೇ ಬರದೇ ತಮ್ಮ ಸಹೋದರಿಯರು-ಹೆಣ್ಣು ಮಕ್ಕಳನ್ನೂ ಕರೆತರಬೇಕು ಎಂದು ಹುಜೂರ್‌ ಕ್ಷೇತ್ರದ ಬಿಜೆಪಿ ಶಾಸಕ ರಾಮೇಶ್ವರ ಶರ್ಮಾ ಹೇಳಿದ್ದಾರೆ.


ಶರ್ಮಾ ಅವರ ಈ ಹೇಳಿಕೆಗೆ ವಿರೋಧ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಎಐಎಂಐಎಂ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. 

ಸೋಮವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶರ್ಮಾ, 'ನವರಾತ್ರಿ ವೇಳೆಯಲ್ಲಿ ಆಯೋಜಿಸುವ ಗರ್ಬಾ ಕಾರ್ಯಕ್ರಮದಲ್ಲಿ ಮುಸ್ಲಿಮರು ಪಾಲ್ಗೊಳ್ಳಬೇಕು ಎಂದಾದರೆ ಅವರು 'ಜೈ ಶ್ರೀರಾಮ್‌' ಘೋಷಣೆಗಳನ್ನು ಹೇಳಬೇಕು ಹಾಗೂ ಹಣೆಯಲ್ಲಿ ತಿಲಕ ಧರಿಸಿರಬೇಕು' ಎಂದರು.

ಜತೆಗೆ 'ಈ ರೀತಿ ಮಾಡುವುದರಿಂದ ಯಾರಿಗೂ ಯಾವ ತೊಂದರೆಯೂ ಆಗುವುದಿಲ್ಲ. ಅಲ್ಲದೇ, ಮುಸ್ಲಿಂ ಹುಡುಗರು ಒಬ್ಬರೇ ಏಕೆ ಬರಬೇಕು? ಅವರ ಸಹೋದರಿಯರು, ಹೆಣ್ಣುಮಕ್ಕಳನ್ನೂ ಕರೆತರಲಿ' ಎಂದೂ ಹೇಳಿದ್ದಾರೆ.

ಈ ಬಗ್ಗೆ ಕಾಂಗ್ರೆಸ್ ನಾಯಕ ಆರಿಫ್‌ ಮಸೂದ್‌ ಪ್ರತಿಕ್ರಿಯಿಸಿ, ಶರ್ಮಾ ಅವರು ತಾವು ಬಳಸುವ ಮಾತಿನ ಬಗ್ಗೆ ನಿಗಾವಹಿಸಬೇಕು. ಮೊದಲನೆಯದಾಗಿ ಮುಸ್ಲಿಮರಿಗೂ ಗರ್ಬಾಕ್ಕೂ ಯಾವುದೇ ಸಂಬಂಧವಿಲ್ಲ. ಶರ್ಮಾ ತಮ್ಮ ಹೇಳಿಕೆಗಳ ಮೂಲಕ ಕೋಮು ಭಾವನೆಯನ್ನು ಪ್ರಚೋದಿಸುತ್ತಿದ್ದಾರೆ ಎಂದಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries