HEALTH TIPS

ಜಮ್ಮು-ಕಾಶ್ಮೀರ ಕುರಿತು ಇಸ್ಲಾಮಿಕ್ ಸಹಕಾರ ಸಂಘಟನೆಯ ಹೇಳಿಕೆ ತಿರಸ್ಕರಿಸಿದ ಭಾರತ

ನವದೆಹಲಿ(PTI): 'ಇಸ್ಲಾಮಿಕ್‌ ಸಹಕಾರ ಸಂಘಟನೆಯ(ಒಸಿಐ) ಜಮ್ಮು-ಕಾಶ್ಮೀರ ಕುರಿತ ಗುಂಪು ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಯು ಭಾರತದ ಕುರಿತು 'ಅನಗತ್ಯ ಹಾಗೂ ವಾಸ್ತವಿಕವಾಗಿ ತಪ್ಪಾದ' ಅಂಶಗಳನ್ನು ಒಳಗೊಂಡಿದೆ' ಎಂದಿರುವ ಭಾರತ, ಈ ಹೇಳಿಕೆಯಲ್ಲಿನ ಉಲ್ಲೇಖಗಳನ್ನು ಸಾರಾಸಗಟಾಗಿ ತಿರಸ್ಕರಿಸಿರುವುದಾಗಿ ಬುಧವಾರ ಹೇಳಿದೆ. 


'ಭಾರತದ ಆಂತರಿಕ ವಿಚಾರಗಳ ಕುರಿತು ಮಾತನಾಡುವುದಕ್ಕೆ ಒಸಿಐಗೆ ಯಾವುದೇ ಅಧಿಕಾರ ಇಲ್ಲ' ಎಂದು ವಿದೇಶಾಂಗ ಸಚಿವಾಲಯ ತಿರುಗೇಟು ನೀಡಿದೆ.

'ವಿಶ್ವಸಂಸ್ಥೆಯ 81ನೇ ಸಾಮಾನ್ಯಸಭೆ ಸಂದರ್ಭದಲ್ಲಿ, ಜಮ್ಮು-ಕಾಶ್ಮೀರ ಕುರಿತ ಒಸಿಐ ಗುಂಪಿನ ಸಭೆಯನ್ನು ಉದ್ದೇಶಿಸಿ ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್‌ ಡಾರ್ ಮಾತನಾಡಿದರು. ಜಮ್ಮು-ಕಾಶ್ಮೀರ ವಿಚಾರವಾಗಿ ವಿಶ್ವಸಂಸ್ಥೆ ಹಾಗೂ ಇತರ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಒಸಿಐ ಸದಸ್ಯ ರಾಷ್ಟ್ರಗಳು ಒಮ್ಮತದ ನಿಲುವು ತಾಳಬೇಕು ಎಂದು ಅವರು ಒತ್ತಾಯಿಸಿದರು' ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ 'ಎಕ್ಸ್‌'ನಲ್ಲಿ ಬುಧವಾರ ಪೋಸ್ಟ್‌ ಮಾಡಿತ್ತು.

ಈ ಪೋಸ್ಟ್‌ಗೆ ಭಾರತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

'ಜಮ್ಮು-ಕಾಶ್ಮೀರ ಕುರಿತಂತೆ ಪಾಕಿಸ್ತಾನ ನೀಡುವ ಇಂತಹ ಹೇಳಿಕೆಗಳನ್ನು ಪದೇಪದೇ ಬೆಂಬಲಿಸಲಾಗುತ್ತಿದೆ. ಇಂಥ ನಡೆಯು ಒಸಿಐನ ವಿಶ್ವಾಸಾರ್ಹತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತುವಂತೆ ಮಾಡುತ್ತದೆ' ಎಂದು ವಿದೇಶಾಂಗ ಸಚಿವಾಲಯ ವಕ್ತಾರ ರಣಧೀರ ಜೈಸ್ವಾಲ್‌ ಅವರು 'ಎಕ್ಸ್‌'ನಲ್ಲಿ ಹೇಳಿದ್ದಾರೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries