ಬದಿಯಡ್ಕ: ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಲ್ಲಿ ಪಠ್ಯದ ಜೊತೆಗೆ ಪೂರಕವಾದ ಹೊಸ ಹುರುಪು ಮೂಡಿಸಲು ಮತ್ತು ಭಾಷಾಭಿಮಾನವನ್ನು ಬೆಳೆಸಲು, ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ 'ಗಮಕ ಶ್ರಾವಣ' ಕಾರ್ಯಕ್ರಮ ಗುರುವಾರ ಅಪರಾಹ್ನ ಆಯೋಜಿಸಲಾಗಿತ್ತು. ಸಂಪೂರ್ಣವಾಗಿ ವಿದ್ಯಾರ್ಥಿಗಳಿಂದಲೇ ನಿರ್ವಹಿಸಲ್ಪಟ್ಟು ಗಮನ ಸೆಳೆಯಿತು. ಕರ್ನಾಟಕ ಗಮಕ ಕಲಾ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಮತ್ತು ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಸಹಯೋಗದೊಂದಿಗೆ ಈ ಸಾಂಸ್ಕøತಿಕ ಹಬ್ಬ ನಡೆಯಿತು.
ಕಾರ್ಯಕ್ರಮವನ್ನು ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ ದೀಪ ಬೆಳಗಿಸಿ ಉದ್ಘಾಟಿಸಿ ಕನ್ನಡ ಭಾಷೆ, ಸಾಹಿತ್ಯ ಸಂಸ್ಕøತಿಗಳ ಸಮೃದ್ಧಿಯನ್ನು ಹೊಸ ತಲೆಮಾರಿಗೆ ಪರಿಚಯಿಸಲು ಗಮಕ ಕಲಾ ಪರಿಷತ್ತಿನ ವಿಶಿಷ್ಟ ಕಾರ್ಯಯೋಜನೆ ಸ್ತುತ್ಯರ್ಹವಾದುದು. ಸೌಖ್ಯ ಸಮಾಜ ನಿರ್ಮಾಣದಲ್ಲಿ ಇಂತಹ ಕ್ರಿಯಾತ್ಮಕ ಕಾರ್ಯಕ್ರಮಗಳು ಪ್ರೇರಕವಾದುದು ಎಂದು ತಿಳಿಸಿದರು.
ಗಮಕ ಪರಿಷತ್ತಿನ ಕಾರ್ಯದರ್ಶಿ ವಿ.ಬಿ. ಕುಳಮರ್ವ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಈ ಬಾರಿ ಎಡನೀರು ಮಠದಲ್ಲಿ ಉದ್ಘಾಟನೆಗೊಂಡ ಈ ಸರಣಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೇ ವಾಚನ ಮತ್ತು ವ್ಯಾಖ್ಯಾನವನ್ನು ನಡೆಸುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಗಮಕ ಪರಿಷತ್ತಿನ ಕೇರಳ ಘಟಕದ ಅಧ್ಯಕ್ಷ ತೆಕ್ಕೆಕೆರೆ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಶಿವಪ್ರಕಾಶ್ ಎಂ.ಕೆ. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಶಾಲೆಯಲ್ಲಿ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗಳಿಗೆ ಬೆಂಬಲ ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಲು ಸದಾ ಸನ್ನದ್ಧವಾಗಿದೆ. ದೊರಕುವ ಎಲ್ಲಾ ಅನುಕೂಲತೆಗಳನ್ನು ಬಳಸುವ ಸಾಮಥ್ರ್ಯ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ನಿವೃತ್ತ ಪ್ರಾಂಶುಪಾಲ ಪ್ರೊ.ಪಿ.ಎನ್.ಮೂಡಿತ್ತಾಯ, ಶಿಕ್ಷಕಿಯರಾದ ಶೈಲಜಾ ಎ, ಡಾ.ವಿದ್ಯಾಲಕ್ಷ್ಮಿ ಬೇಳ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಶರಧಿ, ವೈಷ್ಣವಿ ಪ್ರಾರ್ಥನೆ ಹಾಡಿದರು. ಸುಕೃತಾ ರಾಜ್ ಸಿ.ಸ್ವಾಗತಿಸಿ, ಪ್ರಣಮ್ಯ ಎಂಜಿ ವಂದಿಸಿದರು. ಶ್ರೇಯ ಕೆ.ಎಸ್. ಕಾರ್ಯಕ್ರಮ ನಿರೂಪಿಸಿದಳು.
'ಸೀತಾ ಪ್ರಲಾಪ-ಚೂಡಾಮಣಿ' ಕಾವ್ಯ ಭಾಗವನ್ನು ಮಧುರಾ ಎಚ್.ಕೆ. ಮತ್ತು ಶ್ರದ್ಧಾ ಎಂ.ಆರ್. ವಾಚಿಸಿದರು. ಅನಘ ಡಿ. ಮತ್ತು ಪೃಥ್ವಿ ವ್ಯಾಖ್ಯಾನಗೈದರು.

.jpg)
.jpg)
.jpg)
.jpg)
