HEALTH TIPS

ತೆರುವತ್ ಭಗವತೀ ನಗರದಲ್ಲಿ ಓಂ ಶಕ್ತಿ ಕಲಾ ಕ್ರೀಡಾ ಕೇಂದ್ರದ ವಾರ್ಷಿಕೋತ್ಸವ

ಕಾಸರಗೋಡು: ತೆರುವತ್ ಭಗವತೀ  ನಗರದಲ್ಲಿರುವ ಓಂ ಶಕ್ತಿ ಕಲಾ ಕ್ರೀಡಾ  ಕೇಂದ್ರದ  24 ನೇ ವಾರ್ಷಿಕೋತ್ಸವ ಶ್ರೀ ಚೀರುಂಬ ಭಗವತೀ  ಕ್ಷೇತ್ರದ  ಸಭಾಂಗಣದಲ್ಲಿ  ವಿವಿಧ ಕಲಾ ಮತ್ತು ಕ್ರೀಡಾ ಸ್ಪರ್ಧೆಗಳೊಂದಿಗೆ  ಜರುಗಿತು.

ವಿವಿಧ ಕಲಾ-ಕ್ರೀಡಾ ಸ್ಪರ್ಧೆಗಳೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಶ್ರೀಚೀರುಂಭಾ  ಭಗವತಿe  ಕ್ಷೇತ್ರದ  ಪ್ರಧಾನ  ಕಾರ್ಯದರ್ಶಿ  ಟಿ. ವಿ. ವಿಜಯನ್  ಉದ್ಘಾಟಿಸಿದರು ಕ್ಷೇತ್ರದ ಆಚಾರ ಸ್ಥಾನಿಕರು  ವಿಶಿಷ್ಟ ಅತಿಥಿಗಳಾಗಿ ಭಾಗವಹಿಸಿದ್ದರು. ಓಂ ಶಕ್ತಿ ಕಲಾ ಕ್ರೀಡಾ  ಕೇಂದ್ರದ ಅಧ್ಯಕ್ಷ  ಮನೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಭಗವತೀ ಕ್ಷೇತ್ರದ ಅಧ್ಯಕ್ಷ  ಕೆ.ಎಂ. ಹರೀಶ್ ಕುಮಾರ್  ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಸಂಘದ ಅಧ್ಯಕ್ಷ ಮನೀಶ್ ಅಧ್ಯಕ್ಷತೆ ವಹಿಸಿದ್ದರು.  ಕ್ಷೇತ್ರದ ಆಚಾರ ಸ್ಥಾನಿಕರು  ವಿಶಿಷ್ಠ ಅತಿಥಿಗಳಾಗಿ ಪಾಲ್ಗೊಂಡಿದ್ದರು. 2025 - 26 ನೇ ಅಧ್ಯಯನ  ವರ್ಷದ ಎಸ್ ಎಸ್ ಎಲ್ ಸಿ ಮತ್ತು ಪ್ಲಸ್ ಟು  ಪರೀಕ್ಷೆಗಳಲ್ಲಿ ವಿಜೇತರಾದ  ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸಂಸ್ಥೆಯ ಪರವಾಗಿ ಸ್ಮರಣಿಕೆ ನೀಡಿ  ಸನ್ಮಾನಿಸಲಾಯಿತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries