HEALTH TIPS

'ಆಜ್ಞೆ ಮಾಡುವಂತಿಲ್ಲ': ಮುಸ್ಲಿಂ ವ್ಯಕ್ತಿ ಮದುವೆಯಾಗಿದ್ದಕ್ಕೆ ಮಗಳನ್ನು ಗೃಹ ಬಂಧನದಲ್ಲಿರಿಸಿದ್ದ ತಂದೆಗೆ ಹೈಕೋರ್ಟ್ ತರಾಟೆ; ಪತಿಯೊಂದಿಗೆ ವಾಸಿಸಲು ಅನುಮತಿ

 ಪ್ರಯಾಗ್‌ರಾಜ್: ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕೆ ಮಗಳನ್ನು ಗೃಹ ಬಂಧನದಲ್ಲಿರಿಸಿದ್ದ ತಂದೆಗೆ ಅಲಹಾಬಾದ್ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಪತಿಯೊಂದಿಗೆ ವಾಸಿಸಲು ಅನುಮತಿ ನೀಡಿದೆ.


ಗಾಜಿಯಾಬಾದ್‌ನ 26 ವರ್ಷದ ಮಹಿಳೆಯನ್ನುಅವರ ತಂದೆಯ ವಶದಿಂದ ಹೈಕೋರ್ಟ್ ಮುಕ್ತಗೊಳಿಸಿದೆ ಮತ್ತು ಆಕೆಯ ಮುಸ್ಲಿಂ ಪತಿಯೊಂದಿಗೆ ವಾಸಿಸಲು ಅನುಮತಿ ನೀಡಿದೆ.

ಮಹಿಳೆ ವಯಸ್ಕಳಾಗಿದ್ದು, ತನ್ನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಭೂತ ಹಕ್ಕನ್ನು ಹೊಂದಿದ್ದಾಳೆ ಎಂದು ನ್ಯಾಯಾಲಯ ಹೇಳಿದೆ.

ಸೋನಿಕಾ ಚೌಹಾಣ್ ಎಂಬ ಮಹಿಳೆ, ಅಕ್ಬರ್ ಖಾನ್ ಅವರೊಂದಿಗಿನ ತನ್ನ ವಿವಾಹವನ್ನು ತಂದೆ ವಿರೋಧಿಸುತ್ತಿದ್ದು, ತನ್ನನ್ನು ಗೃಹ ಬಂಧನದಲ್ಲಿರಿಸಿದ್ದಾರೆ ಎಂದು ಆರೋಪಿಸಿದ್ದರು.

ಮಂಗಳವಾರ ನಡೆದ ವಿಚಾರಣೆಯ ವೇಳೆ, ತಾನು ಸ್ವಯಂಪ್ರೇರಣೆಯಿಂದ ಖಾನ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದೇನೆ ಮತ್ತು ಅವರೊಂದಿಗೆ ವಾಸಿಸಲು ಬಯಸುತ್ತೇನೆ ಎಂದು ಸೋನಿಕಾ ನ್ಯಾಯಾಲಯಕ್ಕೆ ತಿಳಿಸಿದರು. ಖಾನ್ ಕೂಡ ಸೋನಿಕಾ ಅವರೊಂದಿಗೆ ವಾಸಿಸಲು ತಮ್ಮ ಸಮ್ಮತಿಯನ್ನು ವ್ಯಕ್ತಪಡಿಸಿದರು.

ಆದರೆ, ಆಕೆಯ ತಂದೆ ಲಕ್ಷ್ಮಣ್ ಸಿಂಗ್ ಚೌಹಾಣ್, ಅಕ್ಬರ್ ತನ್ನ ಮಗಳಿಗೆ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಮತ್ತು ಆಕೆ ಅವರ ಒತ್ತಡಕ್ಕೆ ಮಣಿದಿದ್ದಾಳೆ ಎಂದು ಹೇಳಿದರು. ಆದರೆ ಯುವತಿ ತಾನು ಸ್ವಂತ ಇಚ್ಛೆಯಿಂದ ಮದುವೆಯಾಗಿರುವುದಾಗಿ ತಿಳಿಸಿದರು.

ಇಬ್ಬರೊಂದಿಗೂ ಸಂವಾದ ನಡೆಸಿದ ನಂತರ, ಯುವತಿಗೆ ತನ್ನ ಸಂಗಾತಿಯನ್ನು ಆಯ್ಕೆ ಮಾಡುವ ಮತ್ತು ತನ್ನ ಸ್ವಂತ ಇಚ್ಛೆಗೆ ಅನುಗುಣವಾಗಿ ತನ್ನ ಜೀವನವನ್ನು ನಡೆಸುವ ಮೂಲಭೂತ ಹಕ್ಕನ್ನು ಹೊಂದಿದಾರೆ. ಆಕೆಯ ಪೋಷಕರು ಅಥವಾ ಇತರ ಕುಟುಂಬ ಸದಸ್ಯರ ಆಕೆಗೆ ಆಜ್ಞೆ ಮಾಡುವಂತಿಲ್ಲ ಅಥವಾ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಸೋನಿಕಾ ತನ್ನ ಸಂಗಾತಿಯೊಂದಿಗೆ ವಾಸಿಸಲು ಸ್ವತಂತ್ರಳಾಗಿದ್ದಾಳೆ ಮತ್ತು ಅವರಿಗೆ ಸೂಕ್ತ ಭದ್ರತೆಯನ್ನು ಖಚಿತಪಡಿಸಿಕೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ. ಅಲ್ಲದೆ ಅವರ ವೈವಾಹಿಕ ಜೀವನದಲ್ಲಿ ಮಧ್ಯಪ್ರವೇಶಿಸದಂತೆ ಕುಟುಂಬದ ಸದಸ್ಯರಿಗೆ ನ್ಯಾಯಾಲಯ ಎಚ್ಚರಿಸಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries