ಮಧೂರು: ಕುತ್ಯಾಳ ಶ್ರೀಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರ ಕೂಡ್ಲು ಸಂಸ್ಥೆಯ ರಜತ ಮಹೋತ್ಸವ ಸಲುವಾಗಿ ನಾಡಿನುದ್ದಕ್ಕೂ ನಡೆಯುತ್ತಿರುವ ಸರಣಿ ಕಾರ್ಯಕ್ರಮಗಳ ಅಂಗವಾಗಿ ಇತ್ತೀಚೆಗೆ ರಜತರಂಗ ಸರಣಿಯ 21ನೇ ಕಾರ್ಯಕ್ರಮವು ಕೀರ್ತಿಶೇಷ ಕಲಾವಿದ ಮಾಣಂಗಾಯಿ ಕೃಷ್ಣ ಭಟ್ ಇವರ ಸಂಸ್ಮರಣೆಯೊಂದಿಗೆ ಕುತ್ಯಾಳ ಕ್ಷೇತ್ರದಲ್ಲಿ ನಡೆಯಿತು.
ಈ ಸಂದರ್ಭ ಕೇಂದ್ರದ ಸದಸ್ಯರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಶಲ್ಯ ಸಾರಥ್ಯ ಎಂಬ ಆಖ್ಯಾನದ ಯಕ್ಷಗಾನ ತಾಳಮದ್ದಳೆ ನಡೆಯಿತು. ಭಾಗವತರಾಗಿ ರಾಮಪ್ರಸಾದ್ ಮಯ್ಯ ಕೂಡ್ಲು ಚಂಡೆ ಮದ್ದಲೆಯಲ್ಲಿ ವೇಣುಗೋಪಾಲ ಬರೆಕೆರೆ, ನವೀನಚಂದ್ರ ಶರ್ಮ ಮುಮ್ಮೇಳದಲ್ಲಿ ನಾಗರಾಜ ಪದಕಣ್ಣಾಯ, ವೇಣುಗೋಪಾಲ ಶೇಣಿ, ನಾಗೇಂದ್ರ ಭಟ್ ಭಾಗವಹಿಸಿದ್ದರು. ಕ್ಷೇತ್ರದ ಅನುವಂಶಿಕ ಮೊಕ್ತೇಸರ ಕೆ.ಜಿ. ಶ್ಯಾನುಭೋಗ್, ಚಂದ್ರಮೋಹನ ಕೂಡ್ಲು ಉಪಸ್ಥಿತರಿದ್ದರು. ನವೀನಚಂದ್ರ ಸ್ವಾಗತಿಸಿ, ಆಕಾಶ್ ಕೂಡ್ಲು ನಿರೂಪಿಸಿದರು, ಕೃಷ್ಣಮೂರ್ತಿ ಅಡಿಗ ಕೂಡ್ಲು ವಂದಿಸಿದರು. ಅನ್ವಿತ ಮತ್ತು ಅವನಿ ಪ್ರಾರ್ಥಿಸಿದರು. ನಾಗೇಂದ್ರ ಭಟ್ ಪ್ರಾಯೋಜಿಸಿದ್ದರು.

.jpg)
