ಮುಳ್ಳೇರಿಯ: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಡೂರು ಮಣಿಯೂರು ಚಿನ್ನಯ್ಯಮೂಲೆ ನಿವಾಸಿ ಅಪ್ಪಯ್ಯ ನಾಯಕ್ ಹಾಗೂ ಪ್ರೇಮ ದಂಪತಿಯ ಪುತ್ರ ಶೋಭಿತ್ (26)ಅವರ ಮೃತದೇಹ ಹಳೇ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಗಿದೆ.
ಮಂಗಳವಾರ ಬೆಳಗ್ಗೆ ತಂದೆಯೊಂದಿಗೆ ಸಮೀಪದ ರಬ್ಬರ್ ತೋಟಕ್ಕೆ ಟ್ಯಾಪಿಂಗ್ ಕೆಲಸಕ್ಕೆ ತೆರಳುವುದಾಗಿ ಮನೆಯಿಂದ ಹೊರಟಿದ್ದ ಶೋಭಿತ್, ಬಹಳ ಹೊತ್ತಿನ ವರೆಗೂ ಮನೆಗೆ ವಾಪಸಗದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸುವ ಮಧ್ಯೆ, ಕುಟುಂಬಸ್ಥರು, ಈ ಹಿಂದೆ ವಾಸವಿದ್ದ ಹಳೇ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದರು. ತಕ್ಷಣ ನೇಣಿನಿಂದ ಕೆಳಗಿಳಿಸಿ ಮುಳ್ಳೇರಿಯದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಿರಲಿಲ್ಲ.
ಶೋಭಿತ್ ಅಡೂರಿನ ಅಡಿಕೆ ವ್ಯಾಪಾರ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದು, ಅವಿವಾಹಿತರಾಗಿದ್ದರು. ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

