ಕಾಸರಗೋಡು: ಪೊಯಿನಾಚಿ ನಿವಾಸಿ, ಯುವ ಕಾಂಗ್ರೆಸ್ ನೇತಾರ ಹರಿಕೃಷ್ಣನ್ (32)ಅವರ ಮೃತದೇಹ ಅವರ ಕಚೇರಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಯೂತ್ ಕಾಂಗ್ರೆಸ್ ಉದುಮ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿಯಾಗಿದ್ದರು.
ಮಂಗಳವಾರ ಮಧ್ಯಾಹ್ನ ಪೆÇಯಿನಾಚಿಯಲ್ಲಿರುವ ಅವರ ಸ್ವಂತ ಕಚೇರಿಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಪೆÇಯಿನಾಚಿಯಲ್ಲಿ ಶಿಕ್ಷಣ ರಿಕ್ರೂಟಿಂಗ್ ಏಜೆನ್ಸಿ ನಡೆಸುತ್ತಿದ್ದ ಇವರು, ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದರು. ಮಂಗಳವಾರ ಬೆಳಗ್ಗೆಯೂ ಮನೆಗೆ ವಾಪಸಾಗದ ಹಿನ್ನೆಲೆಯಲ್ಲಿ ಮೇಲ್ಪರಂಬ ಪೆÇಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು.
ಕೇಸು ದಾಖಲಿಸಿ ಹುಡುಕಾಟ ನಡೆಸುವ ಮಧ್ಯೆ ಹರಿಕೃಷ್ಣನ್ ಕಚೇರಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಮಾಹಿತಿ ಪೋಲೀಸರಿಗೆ ಲಭಿಸಿದೆ.

