ಮಂಜೇಶ್ವರ: ಮೀಯಪದವು ಬಳಿಯ ಬಟ್ಯಪದವಿನಲ್ಲಿ ವ್ಯಾಪಾರಿಯನ್ನು ಹಾಡಹಗಲು ಅಂಗಡಿಗೆ ನುಗ್ಗಿ ಗುಂಡಿಕ್ಕಿ ಕೊಲೆಗೈಯಲೆತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೀಯಪದವು ನಿವಾಸಿ ರಹೀಂ (32) ಎಂಬಾತನನ್ನು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ. ನಿತಿನ್‍ರಾಜ್, ಎಎಸ್ಪಿ ಅಶೋಕ್ ಅಚ್ಯುತ್ ನಿರ್ದೇಶ ಪ್ರಕಾರ ಮಂಜೇಶ್ವರ ಪೆÇಲೀಸ್ ಇನ್ಸ್‍ಪೆಕ್ಟರ್ ಎಂ.ಪಿ. ವಿಷ್ಣುಪ್ರಸಾದ್ ಹಾಗೂ ತಂಡ ಬಂಧಿಸಿದೆ.
ರಹೀಂ ವಿರುದ್ಧ ಕೇರಳ, ಕರ್ನಾಟಕ ರಾಜ್ಯಗಳಲ್ಲಾಗಿ 16 ಪ್ರಕರಣಗಳಿವೆಂದು ಪೆÇಲೀಸರು ತಿಳಿಸಿದ್ದಾರೆ. ವ್ಯಾಪಾರಿಯ ಗುಂಡಿಕ್ಕಿ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಇನ್ನೋರ್ವ ಆರೋಪಿಯಾದ ಕುಳೂರು ಚಿಗುರುಪಾದೆ ಕುನ್ನಿಲ್ ಹೌಸ್ ನಿವಾಸಿ ಮಹಮ್ಮದ್ ಸಫ್ವಾನ್ ಯಾನೆ ಬೆಡಿ ಸಫ್ವಾನ್ (28) ಎಂಬಾತನನ್ನು ಈಗಾಗಲೇ ಬಂಧಿಸಲಾಗಿದೆ.
ಬಟ್ಯಪದವಿನಲ್ಲಿ ಆ. 17ರಂದು ಸುಹೈಲ್ ಮೊಯಿನ್‍ಶೇಖ್ (28) ಎಂಬವರ ಮೇಲೆ ಆರೋಪಿಗಳ ತಂಡ ಗುಂಡುಹಾರಿಸಿ ಅರಬಿ ಕುಂuಟಿಜeಜಿiಟಿeಜಯ ತರಳಿ ಆರೋಪಿಗಳ ಸುಧಾ ದಂಡೆಕೊಡಿಯ ಬುಶೇರ್ ಗುಂಪು ಹಾರಿಸಿದೆ. ಈ ಘಟನೆಗೆ ಸಂಬಂಧಿಸಿ ಖಾದರ್ ಮದಂಗಲ್ಲು, ಮೀಯಪದವು ನಿವಾಸಿ ರಹೀಂ, ಅಬುಬಕ್ಕರ್ ಸಿದ್ದೀಕ್, ಮುಹಮ್ಮದ್ ಸಫ್ವಾನ್ ಎಂಬವರ ವಿರುದ್ಧ ಮಂಜೇಶ್ವರ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದರು. ತಲೆಮರೆಸಿಕೊಂಡಿರುವ ಇತರ ಆರೋಪಿಗಳಿಗಾಗಿ ಪೆÇಲೀಸರು ಹುಡುಕಾಟ ನಡೆಸುತ್ತಿದ್ದಾರೆ.


