ಕಾಸರಗೋಡು: ಕಳೆದ ಭಾನುವಾರ ಮುಂಜಾನೆ ಮೇಲ್ಪರಂಬದಲ್ಲಿ ಕೆಎಸ್ಸಾರ್ಟಿಸಿಯ ಮಿನ್ನಲ್ ಬಸ್ ಡಿಕ್ಕಿಯಾಗಿ ಸಾವನ್ನಪ್ಪಿದ ವ್ಯಕ್ತಿ ತಿರುವನಂತಪುರ ಶಂಖುಮುಖಂ ಶರಣ್ಯಾ ನಿವಾಸದ ಶಾರೋನ್ ಫೆಲ್ (37)ಎಂದು ಗುರುತು ಪತ್ತೆಯಾಗಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ. ಕೋಟ್ಟಾಯಂನಿಂದ ಕಾಸರಗೋಡಿಗೆ ಆಗಮಿಸುತ್ತಿದ್ದ ಬಸ್ ಭಾನುವಾರ ನಸುಕಿಗೆ ಮೇಲ್ಪರಂದಲ್ಲಿ ಶಾರೋನ್ ಅವರಿಗೆ ಡಿಕ್ಕಿಯಾಗಿದ್ದು, ಗಂಭೀರ ಗಾಯಗೊಂಡ ಇವರನ್ನು ಆಸ್ಪತ್ರೆಗೆ ಸಾಗಿಸುವ ಯತ್ನದ ಮಧ್ಯೆ ಸಾವು ಸಂಭವಿಸಿತ್ತು. ಮೃತದೇಹದ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಜನರಲ್ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿತ್ತು.


