ಸಮರಸ ಚಿತ್ರಸುದ್ದಿ: ಕಾಸರಗೋಡು: ಕಾಸರಗೋಡು ಅಪರ ಜಿಲ್ಲಾಧಿಕಾರಿಯಾಗಿ ಅರ್ಚನಾ ಪಿ.ಪಿ ಐಎಎಸ್ ಅಧಿಕಾರ ಸ್ವೀಕರಿಸಿದ್ದಾರೆ. ಕಾಞಂಗಾಡು ವಿಭಾಗೀಯ ಕಚೇರಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಕಾಸರಗೋಡು ಜಿಲ್ಲಾಧಿಕಾರಿ ಚೇಂಬರ್‍ನಲ್ಲಿ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ (ಐಎಎಸ್) ಅವರು ಅರ್ಚನಾ ಅವರನ್ನು ಹೂಗುಚ್ಛನೀಡಿ ಬರಮಾಡಿಕೊಂಡರು. ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಉದಯಕುಮಾರ್ ಪೆರ್ಲ ಉಪಸ್ಥಿತರಿದ್ದರು. ವಯನಾಡ್ ಜಿಲ್ಲಾ ಉಪಜಿಲ್ಲಾಧಿಕಾರಿಯಾಗಿದ್ದರು.


