HEALTH TIPS

ರಾಮ ಮಂದಿರ ಕಾಮಗಾರಿ ಕಾರ್ಯಕ್ಷಮತೆ: ಬ್ಯಾಂಕ್ ಖಾತರಿ ಕೇಳಿದ ನಿರ್ಮಾಣ ಸಮಿತಿ

ಅಯೋಧ್ಯೆ: ಇಲ್ಲಿನ ರಾಮ ಮಂದಿರದ ಕಾಮಗಾರಿಗಳಲ್ಲಿ ತೊಡಗಿಕೊಂಡಿರುವ ಕಂಪನಿಗಳು ಕಾರ್ಯಕ್ಷಮತೆಯ ಕುರಿತು ಬ್ಯಾಂಕ್ ಗ್ಯಾರಂಟಿ ನೀಡಬೇಕು ಎಂದು ‍ಶ್ರೀ ರಾಮ ಜನ್ಮಭೂಮಿ ದೇವಾಲಯ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಮಂಗಳವಾರ ತಿಳಿಸಿದ್ದಾರೆ. 


'ಕಳೆದ ಐದು ವರ್ಷಗಳಿಂದ ಈವರೆಗೆ ಕಾಮಗಾರಿಯ ಪ್ರಗತಿ ಆಧರಿಸಿ ಹಣ ಪಾವತಿ ಮಾಡಲಾಗುತ್ತಿತ್ತು. 

ಇದೀಗ, ಅಂತಿಮ ಪಾವತಿ ಹಂತಕ್ಕೆ ತಲುಪಿದ್ದೇವೆ. ಮುಂಬರುವ ದಿನಗಳಲ್ಲಿ ಕಾಮಗಾರಿ ಗುಣಮಟ್ಟವು ಸುಸ್ಥಿತಿಯಲ್ಲಿ ಇರುತ್ತದೆ ಎಂಬುದನ್ನು ಖಚಿತಪಡಿಸಲು ಕಂಪನಿಗಳು ಖಾತರಿ ನೀಡಬೇಕಿದೆ' ಎಂದು ಅವರು ಕಾಮಗಾರಿ ಪರಿಶೀಲನೆ ಬಳಿಕ ತಿಳಿಸಿದರು.

'ಕಾಮಗಾರಿಗಳನ್ನು ಮೂರನೇ ಸಂಸ್ಥೆಯಿಂದ ಪರಿಶೀಲನೆ ನಡೆಸಲಾಗುವುದು. ಟಾಟಾ ಈಗಾಗಲೇ ಯೋಜನಾ ನಿರ್ವಹಣಾ ಸಲಹಾ ಸಂಸ್ಥೆಯಲ್ಲಿ ತೊಡಗಿಕೊಂಡಿದೆ. ಈ ಪ್ರಕ್ರಿಯೆಯಲ್ಲಿ ಕೈ ಜೋಡಿಸುವಂತೆ ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಯನ್ನೂ ಕೋರಿದ್ದೇವೆ' ಎಂದು ಮಾಹಿತಿ ನಿಡಿದರು.

'ದೇವಾಲಯದ ಕಾಮಗಾರಿ ಪೂರ್ಣಗೊಂಡ ಕಾರಣ, ಅಂತರರಾಷ್ಟ್ರೀಯ ರಾಮ ಕಥಾ ವಸ್ತು ಸಂಗ್ರಹಾಲಯ ಹಾಗೂ ಇತರ ಕೆಲಸಗಳ ಕಡೆಗೆ ಗಮನ ಹರಿಸಿದ್ದೇವೆ. ಜನವರಿ ಅಥವಾ ಫೆಬ್ರುವರಿ ಒಳಗಾಗಿ ಎಲ್ಲವೂ ಪೂರ್ಣಗೊಳ್ಳಲಿದೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries