ಕಾಸರಗೋಡು: ಉದ್ಯೋಗದ ಭರವಸೆ ನೀಡಿ ಕರ್ನಾಟಕ ನಿವಾಸಿ 30ರ ಹರೆಯದ ಯುವತಿಯನ್ನು ಅಂಬಲತ್ತರಕ್ಕೆ ಕರೆದೊಯ್ದು ಮಾನಭಂಗ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿ ಇರಿಯದ ಬಶೀರ್, ಪಳ್ಳಿಕೆರೆಯ ಆಶಿಕ್ ಎಂಬಿವರ ವಿರುದ್ಧ ಅಂಬಲತ್ತರ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಕೆಲಸ ಕೊಡಿಸುವುದಾಗಿ ತಾಯಿಗೆ ಭರವಸೆ ನೀಡಿ, ಆರೋಪಿಗಳಲ್ಲಿ ಓರ್ವ ಯುವತಿಯನ್ನು ಜತೆಗೆ ಕರೆದೊಯ್ದು, ಅಂಬಲತ್ತರದ ಒಂದು ಮನೆಯಲ್ಲಿ ವಾಸಕ್ಕೆ ವ್ಯವಸ್ಥೆ ಮಾಡಿಕೊಟ್ಟು ನಂತರ ಮಾನಭಂಗ ಗೈದಿದ್ದನು. ಬಳಿಕ ಮನೆ ಕೆಲಸಕ್ಕೆಂದು ತಿಳಿಸಿ ಯುವತಿಯನ್ನು ಪಳ್ಳಿಕೆರೆ ನಿವಾಸಿಗೆ ಹಸ್ತಾಂತರಿಸಿದ್ದಾನೆ. ಅಲ್ಲಿಯೂ ದೌರ್ಜನ್ಯವೆಸಗಿರುವುದಾಗಿ ಯುವತಿ ಪೋಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. ಆರೋಪಿಗಳ ಪತ್ತೆಗೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.


