ಕಾಸರಗೋಡು: ಬಿಹಾರದಿಂದ ನಾಪತ್ತೆಯಾಗಿದ್ದ ಬಾಲಕನನ್ನು ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಿಂದ ಪತ್ತೆಹಚ್ಚಲಾಗಿದೆ. ಬಿಹಾರದ ಜಿಲ್ಲೆಯೊಂದರಿಂದ ಇತ್ತೀಚೆಗೆ 15ರ ಹರೆಯದ ಬಾಲಕ ನಾಪತ್ತೆಯಾಗಿದ್ದನು. ಈ ಬಗ್ಗೆ ಎಲ್ಲಾ ಠಾಣೆಗಳಿಗೂ ಮಾಹಿತಿ ರವಾನಿಸಲಾಗಿತ್ತು. ನಿನ್ನೆ ಸಂಜೆ ಹೊಸ ಬಸ್ ನಿಲ್ದಾಣದಿಂದ ನಗರ ಠಾಣೆ ಪೆÇಲೀಸರು ಬಾಲಕನನ್ನು ಪತ್ತೆಹಚ್ಚಿದ್ದಾರೆ. ಅನುಮಾನ ತೋರಿಬಂದ ಹಿನ್ನೆಲೆಯಲ್ಲಿ ಬಾಲಕನನ್ನು ವಿಚಾರಿಸಿದಾಗ ಬಿಹಾರದಿಂದ ಬಂದಿರುವುದಾಗಿ ತಿಳಿಸಿದ್ದು, ಬಳಿಕ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ಬಾಲಕನನ್ನು ಪರವನಡ್ಕದ ಸಿಡಬ್ಲ್ಯೂಸಿಗೆ ಹಸ್ತಾಂತರಿಸಲಾಗಿದೆ.

