ಸುಲ್ತಾನ್ ಬತ್ತೇರಿ: ವಯನಾಡು ಜಿಲ್ಲೆಯ ಸುಲ್ತಾನ್ ಬತ್ತೇರಿ ಪೆÇಲೀಸ್ ಠಾಣೆಯಿಂದ ಕಳವು ಪ್ರಕರಣದಲ್ಲಿ ಅದೇ ಠಾಣೆಯ ಹಿರಿಯ ಪೆÇಲೀಸ್ ಸಿಬ್ಬಂದಿಯನ್ನು ಪೊಲೀಸರುಬಂಧಿಸಿದ್ದಾರೆ. ಸೀನಿಯರ್ ಸಿವಿಲ್ ಪೆÇಲೀಸ್ ಆಫೀಸರ್ ಸಾಬಿತ್ ಬಂಧಿತ. ಘಟನೆ ನಂತರ ತಲೆಮರೆಸಿಕೊಂಡಿದ್ದ ಈತನನ್ನು ಹತ್ತು ದಿನಗಳ ಬಳಿಕ ಎರ್ನಾಕುಳಂ ಕಳಮಶ್ಶೇರಿಯಿಂದ ವಶಕ್ಕೆ ತೆಗೆಯಲಾಗಿದೆ.
ಪ್ರಕರಣವೊಂದರಲ್ಲಿ ಪೆÇಲೀಸರು ವಶಪಡಿಸಿ ತಂದು ಠಾಣೆಯಲ್ಲಿರಿಸಿದ್ದ ಏಳು ಗೋಣಿ ನಿಷೇಧಿತ ತಂಬಾಕು ಉತ್ಪನ್ನಗಳು ಪೆÇಲೀಸ್ ವಶದಿಂದ ನಿಗೂಢವಾಗಿ ನಾಪತ್ತೆಯಾಗಿತ್ತು. . ಬಳಿಕ ಸಿಸಿಟಿವಿ ಮೂಲಕ ತಪಾಸಣೆ ನಡೆಸಿದಾಗ ಕಳವುಪ್ರಕರಣ ಬೆಳಕಿಗೆ ಬಂದಿತ್ತು.
ಪೆÇಲೀಸ್ ಠಾಣೆಯ ರೈಟರ್ ಮೇಜಿನಲ್ಲಿದ್ದ ಬೀಗದ ಕೀ ಬಳಸಿ ದಾಸ್ತಾನು ಕೊಠಡಿ ತೆರೆದು, ಅಲ್ಲಿದ್ದ ತಂಬಾಕು ಉತ್ಪನ್ನಗಳನ್ನು ಪೆÇಲೀಸ್ ಆಫೀಸರ್ ತನ್ನ ಕಾರಿಗೆ ಹಾಕುವ ದೃಶ್ಯ ಸಿಸಿಟಿವಿಯಲ್ಲಿ ಲಭ್ಯವಾಗಿತ್ತು. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ಉದ್ಯೋಗಕ್ಕೆ ಹಾಜರಾಗದೇ ತಲೆಮರೆಸಿದ್ದನು. ಘಟನೆಗೆ ಸಂಬಂಧಿಸಿ ಬತ್ತೇರಿ ಡಿವೈಎಸ್ಪಿ ಅಬ್ದುಲ್ ಕರೀಂ ಸಲ್ಲಿಸಿದ ವರದಿ ಆಧಾರದಲ್ಲಿ ವಯನಾಡು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ನಿರ್ದೇಶ ಮೇರೆಗೆಸಾಬಿತ್‍ನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

