HEALTH TIPS

ಹಾನಿಕಾರಕ ಪ್ರೊಟೀನ್‌: ಸ್ಪಷ್ಟನೆ ಕೇಳಿದ 'ಸುಪ್ರೀಂ'

ನವದೆಹಲಿ (PTI): 'ಪ್ಯಾಕ್ ಆಗಿರುವ ಆಹಾರದ ಪೊಟ್ಟಣದ ಮುಂಭಾಗದಲ್ಲಿ ಪ್ರಕಟಿಸುವ 'ಆರೋಗ್ಯಕ್ಕೆ ಹಾನಿಕಾರಕವಾದ ಪ್ರೊಟೀನ್‌'ಗಳ ಬಗ್ಗೆ ಹೆಚ್ಚಿನ ಸ್ಪಷ್ಟೀಕರಣ ನೀಡುವಂತೆ ಸುಪ್ರೀಂ ಕೋರ್ಟ್‌ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ (ಎಫ್‌ಎಸ್‌ಎಸ್‌ಎಐ) ಸೂಚಿಸಿದೆ. 


ಸಕ್ಕರೆ, ಉಪ್ಪು, ಕೊಬ್ಬು ಹೆಚ್ಚಿನ ಪ್ರಮಾಣದಲ್ಲಿ ಇರುವ ಎಚ್ಚರಿಕೆಯ ಸಂದೇಶವನ್ನು (ಎಫ್‌ಒಪಿಎಲ್‌) ಪ್ಯಾಕ್ ಆಗಿರುವ ಆಹಾರದ ಪೊಟ್ಟಣದ ಮುಂಭಾಗದಲ್ಲಿಯೇ ಪ್ರಕಟಿಸುವುದನ್ನು ಕಡ್ಡಾಯಗೊಳಿಸಿ, ಅದನ್ನು ಹಂತಹಂತವಾಗಿ ಜಾರಿಗೆ ತರಲು ಎಫ್‌ಎಸ್‌ಎಸ್‌ಎಐ ನಿರ್ಧರಿಸಿದೆ. ಇದರಿಂದ ಗ್ರಾಹಕರಿಗೆ ತ್ವರಿತವಾಗಿ ಉತ್ಪನ್ನದಲ್ಲಿರುವ ಪೌಷ್ಟಿಕಾಂಶದ ಮಾಹಿತಿ ಲಭಿಸುತ್ತದೆ ಹಾಗೂ ಆರೋಗ್ಯಕರ ಆಹಾರ ಆಯ್ಕೆಯ ನಿರ್ಧಾರ ತೆಗೆದುಕೊಳ್ಳಲು ಸಹಾಯವಾಗುತ್ತದೆ.

ಮಕ್ಕಳು ಅನಾರೋಗ್ಯಕರ ಆಹಾರ ಪದ್ಧತಿಗಳನ್ನು ಬೆಳೆಸಿಕೊಳ್ಳುತ್ತಿರುವ ಬಗ್ಗೆ ಗುರುವಾರ ತೀವ್ರ ಕಳವಳ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್‌, ಶಾಲೆಗಳಲ್ಲಿ 'ಪೌಷ್ಟಿಕಾಹಾರ ಸಾಕ್ಷರತೆ'ಯನ್ನು ಹೆಚ್ಚಿಸಲು ಕೇಂದ್ರವು ಹೇಗೆ ಯೋಚಿಸುತ್ತಿದೆ ಎಂದು ಕೇಂದ್ರವನ್ನು ಪ್ರಶ್ನಿಸಿತ್ತು.

'ಆಹಾರದ ಪೊಟ್ಟಣದ ಮೇಲೆ ಮುದ್ರಿಸುವ 'ಆರೋಗ್ಯಕ್ಕೆ ಹಾನಿಕಾರಕ ಪ್ರೊಟೀನ್‌' ಮಾಹಿತಿಯನ್ನು ಹೇಗೆ ಅರ್ಥೈಸಿಕೊಳ್ಳಬೇಕು ಹಾಗೂ ಪೌಷ್ಟಿಕಾಹಾರ ಸಾಕ್ಷರತೆಗೆ ಸಂಬಂಧಿಸಿದ ಇತರ ಅಂಶಗಳ ಬಗ್ಗೆಯೂ ವಿವರಣೆ ನೀಡಿ' ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ. ವಿನೋದ ಚಂದ್ರನ್ ಅವರ ಪೀಠವು ಎಫ್‌ಎಸ್‌ಎಸ್‌ಎಐಗೆ ಸೂಚಿಸಿದೆ.

'ಎಫ್‌ಒಪಿಎಲ್‌' ಪ್ರಕಟಿಸುವುದನ್ನು ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ '3ಎಸ್‌' ಮತ್ತು 'ಅವರ್‌ ಹೆಲ್ತ್‌ ಸೊಸೈಟಿ' ಸಂಸ್ಥೆಗಳು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್‌ 28ರಂದು ನಡೆಯಲಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries