HEALTH TIPS

ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ನಮೀಬಿಯಾದಿಂದ ತಂದಿದ್ದ 'ಗೌರವ್‌' ಚೀತಾ ಸಾವು

ಶಿಯೋಪುರ್‌: ನಮೀಬಿಯಾದಿಂದ ಭಾರತಕ್ಕೆ ತರಲಾಗಿದ್ದ ಚೀತಾ 'ಗೌರವ್‌' ಮಧ್ಯ ಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಸೋಮವಾರ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


'ಕಾಡಿನಲ್ಲಿದ್ದ ಚೀತಾವನ್ನು ಸೆಪ್ಟೆಂಬರ್‌ 12ರಂದು ರಕ್ಷಿಸಲಾಯಿತು. ನಿತ್ರಾಣಗೊಂಡಿದ್ದ ಚೀತಾ ನಿರ್ಜಲೀಕರಣದಿಂದ (ಡೀಹೈಡ್ರೇಷನ್‌) ಬಳಲುತ್ತಿತ್ತು. 

ಅಲ್ಲದೇ ಅದರ ಸ್ನಾಯುಗಳೂ ದುರ್ಬಲಗೊಂಡಿದ್ದವು. ಕೂಡಲೇ ಅದಕ್ಕೆ ಚಿಕಿತ್ಸೆ ‍ಪ್ರಾರಂಭಿಸಲಾಯಿತು. ಆದರೂ ಸೋಮವಾರ ಸಂಜೆ 4 ಗಂಟೆಗೆ ಚೀತಾ ಸಾವಿಗೀಡಾಯಿತು. ಮರಣೋತ್ತರ ಪ‍ರೀಕ್ಷೆ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ' ಎಂದು ಚೀತಾ ಯೋಜನೆಯ ನಿರ್ದೇಶಕರು ತಿಳಿಸಿದ್ದಾರೆ.

ಸದ್ಯ ಕುನೊ ಉದ್ಯಾನದಲ್ಲಿ51 ಚೀತಾಗಳಿವೆ. ಈ ಪೈಕಿ 36 ಭಾರತದಲ್ಲೇ ಜನಿಸಿವೆ.

ಭಾರತದಲ್ಲಿ ನಶಿಸಿಹೋಗಿದ್ದ ಚೀತಾ ಸಂತತಿಯನ್ನು ಮತ್ತೆ ಹೆಚ್ಚಿಸಲು, 'ಪ್ರಾಜೆಕ್ಟ್‌ ಚೀತಾ' ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಚೀತಾಗಳನ್ನು ತಂದು ಬಿಡಲಾಗಿದೆ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries