ಲಖನೌ: ಉತ್ತರ ಪ್ರದೇಶದ ಲಖೀಂಪುರ ಖೇರಿ ನಗರದ ಶಾಲೆಯಲ್ಲಿ ಸೋಮವಾರ ವ್ಯಕ್ತಿಯೊಬ್ಬ ಶಿಕ್ಷಕಿಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿ, ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಏಕಾಏಕಿ ಶಾಲೆಗೆ ನುಗ್ಗಿದ ನೌರಂಗಾಬಾದ್ ನಿವಾಸಿ ಸೌದ್ ಅನ್ಸಾರಿ, ತರಗತಿಯಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕಿ ನಿಶಾತ್ ಫಾತಿಮಾ(26) ಅವರನ್ನು ತರಗತಿಯಿಂದ ಎರಡನೇ ಮಹಡಿಗೆ ಕರೆದೊಯ್ದಿದ್ದಾನೆ.
ಬಳಿಕ ಇಬ್ಬರ ನಡುವ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಸೌದ್ ಶಿಕ್ಷಕಿ ಮೇಲೆ ಎರಡು ಬಾರಿ ಗುಂಡು ಹಾರಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬಂಧನದ ಭೀತಿಯಿಂದ ಸೌದ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ.

