HEALTH TIPS

ಸಂಪುಟ ಕಾರ್ಯದರ್ಶಿಗೆ ಚುನಾವಣಾ ಆಯುಕ್ತರು ಬರೆದ ಪತ್ರ ಉಪ ಚುನಾವಣಾ ಆಯುಕ್ತರೋರ್ವರಿಗೆ ಸಂಬಂಧಿಸಿತ್ತು, ಜ್ಞಾನೇಶ್‌ ಕುಮಾರ್‌ ಕುರಿತಲ್ಲ: ವರದಿ

ನವದೆಹಲಿ:  ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಸಂಪುಟ ಕಾರ್ಯದರ್ಶಿಗೆ ಬರೆದಿದ್ದ ಪತ್ರವು ಹಿರಿಯ ಉಪ ಚುನಾವಣಾ ಆಯುಕ್ತರೋರ್ವರ (ಡಿಇಸಿ) ಕಾರ್ಯ ನಿರ್ವಹಣೆಗೆ ಸಂಬಂಧಿಸಿದ್ದಾಗಿತ್ತು ಮತ್ತು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್‌ ಕುಮಾರ್ ಅವರ ಕುರಿತಾಗಿರಲಿಲ್ಲ ಎಂದು ಸುದ್ದಿಸಂಸ್ಥೆಯು ರವಿವಾರ ಬಲ್ಲ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.


ಈ ಪತ್ರವು ಯಾವುದೇ ನೀತಿ ವಿಷಯಗಳಿಗೆ ಸಂಬಂಧಿಸಿರಲಿಲ್ಲ ಎಂದು ಚುನಾವಣಾ ಆಯೋಗ ಶನಿವಾರ ಸ್ಪಷ್ಟಪಡಿಸಿತ್ತು.

ಮೂಲಗಳ ಪ್ರಕಾರ, ಜುಲೈ 29ರಂದು ಸಂಪುಟ ಕಾರ್ಯದರ್ಶಿ ಟಿ.ವಿ.ಸೋಮನಾಥನ್ ಅವರಿಗೆ ಬರೆಯಲಾಗಿದ್ದ ಈ ಪತ್ರದಲ್ಲಿ ಚುನಾವಣೆಗೆ ಸಂಬಂಧಿಸಿದ ವಿಷಯಗಳಲ್ಲಿ ತೊಡಗಿಕೊಂಡಿದ್ದ ಹಿರಿಯ ಅಧಿಕಾರಿಯ ಕುರಿತು ಉಲ್ಲೇಖಿಸಲಾಗಿತ್ತು. ಆದರೆ, ಇದು ವರ್ಗೀಕೃತ ವಿಷಯವಾಗಿದೆ ಎಂದು ತಿಳಿಸಿದ ಮೂಲಗಳು ಪತ್ರದಲ್ಲಿಯ ವಿಷಯಗಳನ್ನು ಬಹಿರಂಗಪಡಿಸಿಲ್ಲ.

ಅಧಿಕಾರಿಗಳು ಸಾಮಾನ್ಯವಾಗಿ ಸಿಬ್ಬಂದಿಯ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಇಂತಹ ವಿಷಯಗಳನ್ನು ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ)ಗಮನಕ್ಕೆ ತರುತ್ತಾರೆ. ಪತ್ರವು ಜ್ಞಾನೇಶ್‌ ಕುಮಾರ್ ವಿರುದ್ಧವೇ ಆಗಿದ್ದರೆ ಶಿಷ್ಟಾಚಾರದ ಪ್ರಕಾರ ಅದನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಬೇಕಾಗುತ್ತಿತ್ತು ಎಂದು ಈ ಮೂಲಗಳು ವಿವರಿಸಿವೆ.

ಚುನಾವಣಾ ಆಯೋಗದಲ್ಲಿ ಕೆಲಸದ ಹಂಚಿಕೆ ಮತ್ತು ಐಟಿ ವಿಭಾಗದ ಮೇಲ್ವಿಚಾರಣೆಯ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿವೆ ಎಂಬ ವರದಿಗಳ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಶನಿವಾರ ನಡೆದ ಚುನಾವಣಾ ಆಯೋಗದ ಸಭೆಯ ಬಳಿಕ ಹೊರಡಿಸಲಾದ ಹೇಳಿಕೆಯಲ್ಲಿ, ಸಂಪುಟ ಕಾರ್ಯದರ್ಶಿಗೆ ಬರೆದ ಪತ್ರವು ಆಯೋಗದ ಯಾವುದೇ ನೀತಿ ವಿಷಯಕ್ಕೆ ಅಥವಾ ಐಟಿ ವಿಭಾಗಕ್ಕೆ ಸಂಬಂಧಿಸಿದ್ದಲ್ಲ, ಬದಲಿಗೆ ಆಯೋಗಕ್ಕೆ ಪ್ರಭಾರ ನಿಯೋಜನೆಗೊಂಡಿರುವ ಅಧಿಕಾರಿಯೊಬ್ಬರ ಕಾರ್ಯವೈಖರಿಗೆ ಸಂಬಂಧಿಸಿದ್ದಾಗಿದೆ. ಆಯುಕ್ತರ ಆದೇಶದ ನಂತರ ಸಂಬಂಧಿತ ಅಧಿಕಾರಿ ಹೊರಡಿಸಿದ್ದ ಕೆಲಸದ ಮರುಹಂಚಿಕೆ ಆದೇಶಗಳನ್ನು ವಾಸ್ತವವಾಗಿ ಜಾರಿಗೆ ತರಲಾಗಿಲ್ಲ ಮತ್ತು ಐಟಿ ವಿಭಾಗದ ಮೇಲಿನ ಡಿಇಸಿ ಮೇಲ್ವಿಚಾರಣೆಯನ್ನು ಎಂದಿಗೂ ಹಿಂತೆಗೆದುಕೊಂಡಿರಲಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries