HEALTH TIPS

ಟ್ರಂಪ್‌, ಮಾಧ್ಯಮಗಳ ನಡುವಿನ ಜಟಾಪಟಿ ತೀವ್ರ

ನ್ಯೂಯಾರ್ಕ್: ವಿಶ್ವಸಂಸ್ಥೆ ಸಾಮಾನ್ಯಸಭೆಯಲ್ಲಿ ಪಾಲ್ಗೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಸಭೆಯ ಕಲಾಪಗಳ ವರದಿ ಮಾಡಲು ತೆರಳಿದ್ದ ಸಿಎನ್‌ಎನ್‌ ಸುದ್ದಿವಾಹಿನಿ ಪತ್ರಕರ್ತೆಯೊಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದರೊಂದಿಗೆ, ಮಾಧ್ಯಮಗಳು ಹಾಗೂ ಟ್ರಂಪ್‌ ಅವರ ನಡುವಿನ ಜಟಾಪಟಿ ತೀವ್ರಗೊಂಡಂತಾಗಿದೆ. 


ಸಾಮಾನ್ಯಸಭೆ ನಡೆಯುತ್ತಿದ್ದ ಸಭಾಂಗಣದ ಹೊರಗೆ ಟ್ರಂಪ್‌ ಅವರಿಗೆ ಸಿಎನ್‌ಎನ್‌ ಸುದ್ದಿವಾಹಿನಿ ಪತ್ರಕರ್ತೆ ಕೈಟ್ಲನ್‌ ಕಾಲಿನ್ಸ್ ಎದುರಾಗಿದ್ದಾರೆ. ಈ ವೇಳೆ ಕಾಲಿನ್ಸ್‌ ಅವರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್‌,'ನೀವು ಇಲ್ಲಿ ಬರಲೇಬಾರದು' ಎಂದು ಹೇಳಿದ್ದಾರೆ.

'ನನ್ನ ಕಾರ್ಯಕ್ರಮ ಕುರಿತು ಸಿಎನ್‌ಎನ್‌ ವರದಿ ಮಾಡುತ್ತಿರುವುದು ನನಗೆ ಆಶ್ಚರ್ಯ ಮೂಡಿಸಿದೆ. ನಾನು ಪಾಲ್ಗೊಳ್ಳುವ ಕಾರ್ಯಕ್ರಮಗಳ ಕುರಿತು ವರದಿ ಮಾಡುವುದಿಲ್ಲ ಎಂದು ಹೇಳಿದ್ದಿರಿ. ಹೀಗಾಗಿ, ನೀವು ಇಲ್ಲಿ ಇರಕೂಡದು' ಎಂದೂ ಹೇಳಿದ್ದಾರೆ.

ಸಿಎನ್‌ಎನ್‌, ಎಂಎಸ್‌ ನೌ ಹಾಗೂ ಪೊಲಿಟಿಕೊ ಸುದ್ದಿಸಂಸ್ಥೆಗಳು ತಮ್ಮ ಕುರಿತು ಸುಳ್ಳು ಹಾಗೂ ಕಲ್ಪಿತ ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ ಎಂದು ಆರೋಪಿಸಿರುವ ಟ್ರಂಪ್‌, ಈ ಸುದ್ದಿಸಂಸ್ಥೆಗಳ ‍ಪ್ರತಿನಿಧಿಗಳು ವರದಿಗಾರಿಕೆಗಾಗಿ ಶ್ವೇತಭವನಕ್ಕೆ ಭೇಟಿ ನೀಡುವುದನ್ನು ನಿಷೇಧಿಸಿದ್ದಾರೆ.

ಟ್ರಂಪ್‌ ಆಡಳಿತದ ಈ ಕ್ರಮವನ್ನು ಪ್ರಶ್ನಿಸಿ ಈ ಮಾಧ್ಯಮ ಸಂಸ್ಥೆಗಳು ನ್ಯಾಯಾಲಯದ ಕದ ತಟ್ಟಿವೆ.

'ಪತ್ರಕರ್ತರಿಗೆ ಪ್ರವೇಶ ನಿರಾಕರಿಸಬಹುದು'

'ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಮನವಿ ಮೇರೆಗೆ ಸಿಎನ್‌ಎನ್‌ ಎಂಎಸ್‌ ನೌ ಹಾಗೂ ಪೊಲಿಟಿಕೊ ಸುದ್ದಿಸಂಸ್ಥೆಗಳ ವರದಿಗಾರರು ಶ್ವೇತಭವನ ಆವರಣ ಪ್ರವೇಶಿಸದಂತೆ ನಿರ್ಬಂಧ ಹೇರಬಹುದಾಗಿದೆ' ಎಂದು ನ್ಯಾಯಾಂಗ ಇಲಾಖೆ ಮಂಗಳವಾರ ಹೇಳಿದೆ. 'ಅಧ್ಯಕ್ಷ ಕಚೇರಿ(ಓವಲ್‌ ಆಫೀಸ್‌) ಸೇರಿ ಶ್ವೇತಭವನವು ನಿರ್ಬಂಧಿತ ಪ್ರದೇಶ. ಪತ್ರಕರ್ತರು ಈ ಪ್ರದೇಶ ಪ್ರವೇಶಿಸುವುದನ್ನು ಟ್ರಂಪ್‌ ನಿಯಂತ್ರಿಸಬಹುದು. ಶ್ವೇತಭವನ ಪ್ರವೇಶಿಸಲು ನೀಡುವ ಅವಕಾಶವು ಸವಲತ್ತು ಮಾತ್ರ; ಅದು ಹಕ್ಕು ಅಲ್ಲ' ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಇಲಾಖೆ ತಿಳಿಸಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries